ವಿವೇಕ, ಮೌಲ್ಯಗಳನ್ನು ಕಲಿಸುವುದೇ ಶಿಕ್ಷಣ

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಿ.ಎಲ್.ತ್ರಿಪುರಾಂತಕ, ಡಾ.ಜಿ.ಪ್ರಸಾದಮೂರ್ತಿ, ಡಾ.ಎಂ.ಶಾರದಾ ಇದ್ದರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಜಿ.ಎಲ್.ತ್ರಿಪುರಾಂತಕ, ಡಾ.ಜಿ.ಪ್ರಸಾದಮೂರ್ತಿ, ಡಾ.ಎಂ.ಶಾರದಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿ.ಎಲ್. ತ್ರಿಪುರಾಂತಕ ಅಭಿಪ್ರಾಯ
  • ಶ್ರೀ ನಟರಾಜ ಕಾಲೇಜಿನಲ್ಲಿ ಅಭಿವಿನ್ಯಾಸ ಕಾರ್ಯಕ್ರಮ
ಶಿಕ್ಷಣವೆಂದರೆ ಪರೀಕ್ಷೆ ಬರೆದು ಪದವಿ ಪಡೆಯುವುದಲ್ಲ. ವಿವೇಕದ ಜತೆಗೆ ವಿನಯ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಆಗಿದೆ ಎಂದು ಜೆಎಸ್‌ಎಸ್ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಜಿ.ಎಲ್.ತ್ರಿಪುರಾಂತಕ ಅಭಿಪ್ರಾಯಪಟ್ಟರು.
ನಗರದ ಹೊಸಮಠದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಪೀಳಿಗೆ ಪ್ರೀತಿ, ಪ್ರೇಮದ ವಿಷಯದಲ್ಲಿ ಹೆಚ್ಚಾಗಿ ದಾರಿ ತಪ್ಪುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪ್ರೀತಿಸಿ ನಂತರ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಆಚೆಗೆ ಒಂದು ಬದುಕಿದೆ. ಸ್ಟೇಟಸ್, ಸ್ಟೋರಿ ಇವುಗಳಲ್ಲಿಯೇ ಜೀವನವಿಲ್ಲ. ಇವು ಉಪ್ಪು ಮತ್ತು ಸಕ್ಕರೆ ಇದ್ದಂತೆ. ಹೆಚ್ಚಾಗಿ ಬಳಸುತ್ತಿದ್ದರೆ ಬಿಪಿ ಶುಗರ್‌ನಂತ ಕಾಯಿಲೆಗಳು ಬರುತ್ತವೆ. ಹೀಗಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ವಿದ್ಯೆ ಎಂದರೆ ಪರೀಕ್ಷೆ ಬರೆದು ಪಡೆಯುವ ಪದವಿ ಪತ್ರವಲ್ಲ. ವಿದ್ಯಾವಂತರಾಗುವುದರೊಂದಿಗೆ ಪ್ರಜ್ಞಾವಂತರಾಗಿ ವಿವೇಕದಿಂದ ಬದುಕುವುದು ನಿಜವಾದ ಶಿಕ್ಷಣ. ಇಂದು ವಿದ್ಯಾವಂತರಿಂದಲೇ ಸಮಾಜದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಹಾಗಾಗಿ ಅಂಕ ಪಡೆಯುವುದೇ ಅಂತಿಮ ಗುರಿಯಲ್ಲ. ಓದಿನ ಜತೆಗೆ ನಮ್ಮ ನಡವಳಿಕೆ ಹಾಗೂ ವಿಚಾರಧಾರೆಗಳಿಂದ ಎದುರಿರುವವರು ಗುರುತಿಸುವಂತೆ ಬದುಕಬೇಕು ಎಂದು ಹೇಳಿದರು.
ಸೌಂದರ್ಯಕ್ಕೂ ಸಾಧನೆಗೂ ಸಂಬಂಧ ಇಲ್ಲ. ಯಾರು ಸಹ ಕೀಳರಿಮೆ ಬೆಳೆಸಿಕೊಳ್ಳಬಾರದು. ಇಂದು ಸಾಧನೆ ಮಾಡಿದ ಬಹುತೇಕರು ತಮ್ಮ ಆಕಾರ, ಬಣ್ಣ ಮುಂತಾದ ವಿಷಯಗಳ ಹಂಗು ತೊರೆದು ತಮ್ಮ ಗುರಿ ತಲುಪಿದ್ದಾರೆ. ವಿದ್ಯಾರ್ಥಿಗಳಿಗೆ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ಕ್ರೀಡಾಪಟುಗಳ ಹೆಸರು ನೆನಪಿರುವುದಿಲ್ಲ. ಆದರೆ, ಕೊಲೆ ಮಾಡಿ ಜೈಲಿಗೆ ಹೋದ ತಾರೆಯರನ್ನು ಸಂಭ್ರಮಿಸುತ್ತಾ ಅವರ ಕುರಿತಂತೆ ಹೆಚ್ಚು ತಿಳಿದುಕೊಳ್ಳುತ್ತಾ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಪ್ರಸಾದಮೂರ್ತಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net