ಜಾತಿ ಸಂಘಟನೆಗಳ ಆರ್ಥಿಕಾಭಿವೃದ್ಧಿ ಅಗತ್ಯ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ

ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಎಂ.ರಾಮಪ್ಪ, ಸಿ.ಎನ್.ಮಂಜೇಗೌಡ, ಟಿ.ಗಣೇಶ್, ಎಂ.ಡಿ. ಸುದರ್ಶನ್, ಶ್ರೀಕುಮಾರಮಹಾರಾಜ್, ಶ್ರೀಶಿವಪ್ರಕಾಶ್‌ಮಹಾರಾಜ್, ಎಂ.ಸುಂದರ್, ತೇಜುನಾಯಕ, ಎಂ. ಅನಿಲ್, ಪಿ. ಜಯರಾಮ್, ಕಾವೇರಿ ಬಾಯ್ ಇತರರು ಇದ್ದರು.
ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಎಂ.ರಾಮಪ್ಪ, ಸಿ.ಎನ್.ಮಂಜೇಗೌಡ, ಟಿ.ಗಣೇಶ್, ಎಂ.ಡಿ. ಸುದರ್ಶನ್, ಶ್ರೀಕುಮಾರಮಹಾರಾಜ್, ಶ್ರೀಶಿವಪ್ರಕಾಶ್‌ಮಹಾರಾಜ್, ಎಂ.ಸುಂದರ್, ತೇಜುನಾಯಕ, ಎಂ. ಅನಿಲ್, ಪಿ. ಜಯರಾಮ್, ಕಾವೇರಿ ಬಾಯ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯಾವುದೇ ಜಾತಿ, ಸಂಘಟನೆಗಳು ಗಟ್ಟಿಯಾಗಲು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಯಬೇಕು
  • ಜಾತಿ ರಹಿತ ಸಮ ಸಮಾಜ ನಿರ್ಮಾಣ ಮಾಡಲು ಮಹಾನ್ ವ್ಯಕ್ತಿಗಳ ಆಶಯ ಪಾಲಿಸಲು ಜಯಂತಿಗಳ ಆಚರಣೆ ಅಗತ್ಯ
ಮೈಸೂರು:ಸಂಘಟನೆಗಳು ಉತ್ತಮ ಸಮಾಜ ನಿರ್ಮಾಣ ಮಾಡಲು ಮಹಾನ್ ವ್ಯಕ್ತಿಗಳ ಜೀವನದ ತತ್ವ ಮತ್ತು ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸಕ್ಕೆ ಮುಂದಾಗಬೇಕು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ನಗರ ಪಾಲಿಕೆ ಹಾಗೂ ಸಂತ ಸೇವಾಲಾಲ್ ಜಯಂತ್ಯುತ್ಸವ ಸಮಿತಿಯಿಂದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಜಾತಿ, ಸಂಘಟನೆಗಳು ಗಟ್ಟಿಯಾಗಲು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಯಬೇಕು. ಅದಕ್ಕಾಗಿ ಸಂಘಟನೆ ಮಾಡಬೇಕಿದೆ. ಜಾತಿ ರಹಿತ ಸಮ ಸಮಾಜ ನಿರ್ಮಾಣ ಮಾಡಲು ಮಹಾನ್ ವ್ಯಕ್ತಿಗಳ ಆಶಯ ಪಾಲಿಸಲು ಜಯಂತಿಗಳ ಆಚರಣೆ ಅಗತ್ಯ. ಇದನ್ನು ಮನಗಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ವಿಧಾನಸಭಾ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಸಂತ ಸೇವಾಲಾಲ್ ಅವರು ಸಾಮಾಜಿಕ, ಧಾರ್ಮಿಕ ಸುಧಾರಕರಾಗಿದ್ದರು. ಇವರನ್ನು ಗುರು ಬಂಜಾರ್ ಸಮುದಾಯದ ಆಧ್ಯಾತ್ಮಿಕ ಗುರುಗಳು ಎಂದು ಕರೆಯಲಾಗುತ್ತದೆ. ಸಂತ ಸೇವಾಲಾಲ್ ಅವರು ಪಶು ಸಂಗೋಪನೆಯಲ್ಲಿ ತಮ್ಮ ಕಾರ್ಯವನ್ನು ತೊಡಗಿಸಿಕೊಂಡಿದ್ದರು. ಇವರ ಹೆಸರಿನಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಮನುಷ್ಯ ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಆದ್ದರಿಂದ ತಾವೆಲ್ಲರೂ ಸಂತಲಾಲ್ ಅವರು ತಿಳಿಸಿಕೊಟ್ಟಿರುವ ಹಾದಿಯನ್ನು ಆಯ್ಕೆ ಮಾಡಿಕೊಂಡು ಸಾಗಬೇಕು. ಸಮಾಜಕ್ಕೆ ಅವರು ನೀಡಿದಂತಹ ಕೊಡುಗೆಗಳನ್ನು ನೆನೆಯುತ್ತ ಅವರ ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಟಿ.ಗಣೇಶ್ ಮಾತನಾಡಿ, ಬಂಜಾರರ ಆರಾಧ್ಯ ದೈವ, ಕುಲಗುರು ಸಂತ ಸೇವಾಲಾಲ್ ಎಂದು ತಿಳಿಸಿದರು.
ಆರ್.ಬಿ. ವಿನೋದ್ ಬರೆದಿರುವ ಶ್ರೀಸೇವಾ ಚರಿತಾಮೃತ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕೃಷ್ಣಾಪುರದ ಬಂಜಾರ ಗುರುಪೀಠದ ಶ್ರೀಕುಮಾರಮಹಾರಾಜ್, ವಿಜಯನಗರ ಕೊಟ್ಟೂರು ತಾಲೂಕಿನ ಶಕ್ತಿ ಪೀಠದ ಶ್ರೀಶಿವಪ್ರಕಾಶ್‌ಮಹಾರಾಜ್, ಬಂಜಾರ ಸೇವಾ ಸಂಘದ ಅಧ್ಯಕ್ಷ ಎಂ. ಸುಂದರ್, ಉಪಾಧ್ಯಕ್ಷ ತೇಜುನಾಯಕ, ಕಾರ್ಯದರ್ಶಿ ಎಂ. ಅನಿಲ್, ಸಂಘದ ಜಂಟಿ ಕಾರ್ಯದರ್ಶಿಗಳಾದ ಪಿ. ಜಯರಾಮ್, ಕಾವೇರಿ ಬಾಯ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net