ವೈದ್ಯರು ನಿಜವಾದ ಹೀರೋಗಳು

ಹನಗೋಡು ಹೋಬಳಿಯ ಕರಣಕುಪ್ಪೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಯನ್ನು ವಿ.ಎಚ್.ಫೌಂಡೇಷನ್ ಅಧ್ಯಕ್ಷೆ ವರ್ಷಾ ಹರೀಶ್ ಗೌಡ ಸನ್ಮಾನಿಸಿದರು. ಡಾ.ಸೌಮ್ಯಾ, ರಾಜೇಶ್ವರಿ, ಶಶಿಕಲಾ ಇತರರು ಇದ್ದರು.
ಹನಗೋಡು ಹೋಬಳಿಯ ಕರಣಕುಪ್ಪೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಯನ್ನು ವಿ.ಎಚ್.ಫೌಂಡೇಷನ್ ಅಧ್ಯಕ್ಷೆ ವರ್ಷಾ ಹರೀಶ್ ಗೌಡ ಸನ್ಮಾನಿಸಿದರು. ಡಾ.ಸೌಮ್ಯಾ, ರಾಜೇಶ್ವರಿ, ಶಶಿಕಲಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿ.ಎಚ್.ಫೌಂಡೇಷನ್ ಅಧ್ಯಕ್ಷೆ ವರ್ಷಾ ಹರೀಶ್ ಗೌಡ ಅಭಿಪ್ರಾಯ
ಹನಗೋಡು: ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸಮಾಜದ ನಿಜವಾದ ಹೀರೋಗಳು ಎಂದು ವಿ.ಎಚ್.ಫೌಂಡೇಷನ್ ಅಧ್ಯಕ್ಷೆ ವರ್ಷಾ ಹರೀಶ್ ಗೌಡ ತಿಳಿಸಿದರು.
ಹನಗೋಡು ಹೋಬಳಿಯ ಕರಣಕುಪ್ಪೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಯನ್ನು ಇತ್ತೀಚೆಗೆ ಸನ್ಮಾನಿಸಿ ಅವರು ಮಾತನಾಡಿದರು.
ರೋಗಿಗಳ ಆರೋಗ್ಯ ಕಾಪಾಡಲು ವೈದ್ಯರು, ನರ್ಸ್‌ಗಳು ಹಗಲಿರುಳು ಶ್ರಮಿಸುತ್ತಾರೆ. ತುರ್ತು ಸಂದರ್ಭಗಳಲ್ಲೂ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಸೇವೆ ಸಲ್ಲಿಸುವ ಅವರ ಕಾರ್ಯ ಶ್ಲಾಘನೀಯ ಎಂದರು.
ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ರೋಗಿಗಳು ಗೌರವ ಮತ್ತು ತಾಳ್ಮೆಯಿಂದ ವರ್ತಿಸಬೇಕು. ವೈದ್ಯರ ನಗುಮುಖದ ಮಾತು ಹಾಗೂ ಆತ್ಮೀಯತೆ ರೋಗಿಗಳಲ್ಲಿ ಅರ್ಧದಷ್ಟು ಆತ್ಮವಿಶ್ವಾಸ ಮೂಡಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಗಿರಿದಾಸ್, ವೈದ್ಯಾಧಿಕಾರಿ ಡಾ.ಸೌಮ್ಯಾ, ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಸುರೇಂದ್ರ, ಸತೀಶ್ ಪಾಪಣ್ಣ, ಹರವೆ ಶ್ರೀಧರ್, ಆಶಾ ಕಾರ್ಯಕರ್ತೆಯರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net