ಆದ್ಯತೆ ಮೇರೆಗೆ ಅರ್ಜಿಗಳ ವಿಲೇವಾರಿ

ಎಚ್.ಡಿ.ಕೋಟೆ ತಾಲೂಕಿನಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಪ್ರಜಾಸೇವಾ ಆಂದೋಲನ ಆಯೋಜಿಸಲಾಗಿತ್ತು. ಅಕ್ರಮ ಸಕ್ರಮ ಸಮಿತಿ ಸದಸ್ಯ ಬಾಲಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಪಿಎಸ್‌ಐ ಚಂದ್ರಹಾಸ್ ನಾಯಕ್, ಆರ್‌ಎಫ್‌ಒಗಳಾದ ಹನುಮಂತರಾಜು, ರಾಮಾಂಜನೇಯ, ಅಂತರಸಂತೆ ಗ್ರಾಮದ ಸುನೀಲ್, ಮಹೇಶ್, ಅರಣ್, ಮಾರುತಿ, ಮಹೇಶ್, ಕುಮಾರ್ ವಿಶ್ವಕರ್ಮ, ಪ್ರಕಾಶ್ ಬುದ್ಧ, ರಾಜಣ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಶ್ರೀನಿವಾಸ್ ಹೇಳಿಕೆ
ಎಚ್ ಡಿ ಕೋಟೆ: ತಾಲೂಕಿನ ಅಂತರಸಂತೆ ಗ್ರಾಮದ ಸಾರನಾಥ ಬುದ್ಧ ವಿಹಾರದ ಆವರಣದಲ್ಲಿ ಶನಿವಾರ ತಹಸೀಲ್ದಾರ್ ಶ್ರೀನಿವಾಸ್ ನೇತೃತ್ವದಲ್ಲಿ ಪ್ರಜಾಸೇವಾ ಆಂದೋಲನ ಸಭೆ ಆಯೋಜಿಸಲಾಗಿತ್ತು.
ಅಂತರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ತಮ್ಮೂರಿನ ಸಮಸ್ಯೆ, ವೈಯಕ್ತಿಕ ಸಮಸ್ಯೆಗಳು, ಪಿಂಚಣಿ, ನಿವೇಶನ ಸೇರಿದಂತೆ ಹಲವು ಸೌಲಭ್ಯಗಳನ್ನು ಕೋರಿ ಅರ್ಜಿ ಸಲ್ಲಿಸಿದರು.
ಹೋಬಳಿ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಪ್ರಗತಿ ಒಕ್ಕೂಟ ಅಧ್ಯಕ್ಷ ಪುಟ್ಟರಾಜು ಮಾತನಾಡಿ, ಅಂತರಸಂತೆ ಹೋಬಳಿ ಮಟ್ಟದ ಗ್ರಾಮವಾಗಿದ್ದರೂ ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ನಾಡಕಚೇರಿ ಕಟ್ಟಡ ಕುಸಿದು ಬೀಳುವಂತಿದ್ದು, ನೂತನ ಕಟ್ಟಡ ನಿರ್ಮಿಸಬೇಕು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಅಂತರಸಂತೆ ಕೆಪಿಎಸ್ ಶಾಲೆ ಮಾದರಿಯಲ್ಲಿಯೇ ಬೆಳತ್ತೂರು ಹಾಗೂ ಕೆ.ಆರ್.ಪುರ ಗ್ರಾಮದ ಶಾಲೆಗಳನ್ನು ಮೇಲ್ದರ್ಜೆಗೇರಿಸಬೇಕು. ಸ್ಮಶಾನ ಮಂಜೂರು ಮಾಡುವ ಜತೆಗೆ ಇರುವ ಸ್ಮಶಾನಗಳನ್ನು ಹದ್ದುಬಸ್ತು ಮಾಡಬೇಕು. ಬುದ್ದವಿಹಾರಕ್ಕೆ ಎರಡು ಎಕರೆ ಜಾಗ ಮಂಜೂರು ಜತೆಗೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶ್ರೀನಿವಾಸ್, ಎಲ್ಲ ಇಲಾಖೆಯ ಅಧಿಕಾರಿಗಳು ಸಲ್ಲಿಯಾಗಿರುವ ಸಮಸ್ಯೆಗಳ ಕುರಿತು ಕ್ರಮವಹಿಸಬೇಕು ಸೂಚಿಸಿದರು. ಗ್ರಾಮಸ್ಥರು ಸಲ್ಲಿಸಿರುವ ಎಲ್ಲ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಲಾಗುವುದು. ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು ಶೀಘ್ರದಲ್ಲಿಯೇ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ವಿವಿಧ ಗ್ರಾಮಗಳಿಂದ 62 ಅರ್ಜಿಗಳು ಸಲ್ಲಿಕೆಯಾದವು. ಅಕ್ರಮ ಸಕ್ರಮ ಸಮಿತಿ ಸದಸ್ಯ ಬಾಲಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಪಿಎಸ್‌ಐ ಚಂದ್ರಹಾಸ್ ನಾಯಕ್, ಆರ್‌ಎಫ್‌ಒಗಳಾದ ಹನುಮಂತರಾಜು, ರಾಮಾಂಜನೇಯ, ಅಂತರಸಂತೆ ಗ್ರಾಮದ ಸುನೀಲ್, ಮಹೇಶ್, ಅರಣ್, ಮಾರುತಿ, ಮಹೇಶ್, ಕುಮಾರ್ ವಿಶ್ವಕರ್ಮ, ಪ್ರಕಾಶ್ ಬುದ್ಧ, ರಾಜಣ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net