ಥೈರಾಯ್ಡ ತಡೆಗೆ ಆಹಾರ ಕ್ರಮ ಮುಖ್ಯ

 ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ಥೈರಾಯ್ಡ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸಿ.ಪಿ.ಮಧು, ಡಾ.ಡಿ.ನಾರಾಯಣಪ್ಪ, ಡಾ. ಎಂ.ಸುರೇಶ್ ಬಾಬು, ಡಾ.ವೈ.ಎಸ್.ರವಿಕುಮಾರ್, ಡಾ. ಲಕ್ಷ್ಮೀ ನಾಗೇಂದ್ರ ಇತರರಿದ್ದರು.
ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ಥೈರಾಯ್ಡ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸಿ.ಪಿ.ಮಧು, ಡಾ.ಡಿ.ನಾರಾಯಣಪ್ಪ, ಡಾ. ಎಂ.ಸುರೇಶ್ ಬಾಬು, ಡಾ.ವೈ.ಎಸ್.ರವಿಕುಮಾರ್, ಡಾ. ಲಕ್ಷ್ಮೀ ನಾಗೇಂದ್ರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಆಸ್ಪತ್ರೆ ನಿರ್ದೇಶಕ ಡಾ.ಸಿ.ಪಿ.ಮಧು ಸಲಹೆ
  • ವಿಶ್ವ ಥೈರಾಯ್ಡ ಜಾಗೃತಿ ದಿನಾಚರಣೆ ಕಾರ್ಯಕ್ರಮ
ಮೈಸೂರು: ಥೈರಾಯ್ಡ ನಿಯಂತ್ರಣಕ್ಕೆ ಉತ್ತಮ ಜೀವನ ಶೈಲಿ ಆಹಾರ ಕ್ರಮ ಬಹಳ ಮುಖ್ಯ ಎಂದು ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ಹೇಳಿದರು.
ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ಥೈರಾಯ್ಡ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಥೈರಾಯ್ಡ ಗ್ರಂಥಿಯ ಮಹತ್ವ, ಅದರ ಕಾರ್ಯಗಳು ಮತ್ತು ಸಂಬಂಧಿತ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಇದು ಇತ್ತೀಚೆಗೆೆ ಸಾಮಾನ್ಯ ಕಾಯಿಲೆಯಾಗಿದ್ದು, ಇದನ್ನು ರಕ್ತ ಪರೀಕ್ಷೆಗಳ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು. ಸೂಕ್ತ ವೈದ್ಯಕೀಯ ಚಿಕಿತ್ಸೆ, ಔಷಧಗಳು, ಆಹಾರ ಕ್ರಮ ಹಾಗೂ ಶಿಸ್ತಿನ ಜೀವನ ಶೈಲಿಯ ಮೂಲಕ ಇದನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಬಹುದು ಎಂದರು.
ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ನಾರಾಯಣಪ್ಪ ಮಾತನಾಡಿ, ಥೈರಾಯ್ಡ ಜಾಗತಿಕ ಮತ್ತು ಸಾಮಾನ್ಯ ಕಾಯಿಲೆಯಾಗಿದ್ದು, ಇದರ ಬಗ್ಗೆ ಅರಿವು ಮುಖ್ಯ. ಥೈರಾಯ್ಡ ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಸಣ್ಣ ಗ್ರಂಥಿಯಾಗಿದೆ.
ಇದು ದೇಹದ ಅನೇಕ ಪ್ರಮುಖ ಕಾರ್ಯ ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಗ್ರಂಥಿಯ ಕಾರ್ಯವೈಖರಿಯಲ್ಲಿ ಏರುಪೇರಾದಾಗ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆ ಉಂಟಾಗುತ್ತವೆ ಎಂದು ತಿಳಿಸಿದರು
ನವಜಾತು ಶಿಶುವಿನಿಂದ ಹಿಡಿದು ವಯಸ್ಕರಲ್ಲೂ ಈ ಕಾಯಿಲೆ ಕಂಡುಬರುತ್ತಿದ್ದು, ಗರ್ಭಾವಸ್ಥೆಯಲ್ಲಿ ಥೈರಾಯ್ಡ ಹಾರ್ಮೋನುಗಳ ಬೇಡಿಕೆ ಶೇ.50ರಷ್ಟು ಹೆಚ್ಚಾಗುತ್ತದೆ. ಇದು ತಾಯಿಯ ಚಯಾಪಚಯ ಕ್ರಿಯೆ ಮತ್ತು ಮಗುವಿನ ಮಿದುಳು ಹಾಗೂ ನರಮಂಡಲದ ಬೆಳವಣಿಗೆಗೆ ಅತ್ಯಗತ್ಯವಾಗಿರುತ್ತದೆ. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಸರಿಯಾದ ಚಿಕಿತ್ಸೆ ಮತ್ತು ಔಷಧ ತೆಗೆದುಕೊಳ್ಳುವುದರಿಂದ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿರಬಹುದು ಎಂದು ಸಲಹೆ ನೀಡಿದರು.
ಬೆಂಗಳೂರಿನ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ  ಸರ್ಜಿಕಲ್ ಆಂಕೋಲಜಿಸ್ಟ್ ಎಂಡೋಕ್ರೈನ್ ಮತ್ತು ಬ್ರೆಸ್ಟ್ ಸರ್ಜನ್ ಡಾ.ಸಸಿಮೌಲಿ ವೇಲಾಡಿ ಮಾತನಾಡಿ, ಇತ್ತೀಚಿನ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಪ್ರಗತಿಯಾಗಿದ್ದು, ಥೈರಾಯ್ಡ ಗಂಟುಗಳು ಮತ್ತು ಗಡ್ಡೆಗಳನ್ನು ನೋವುರಹಿತ ಮತ್ತು ಗಾಯಗಳಿಲ್ಲದೆ ತೆಗೆದುಹಾಕಲು ಇರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಅವಕಾಶಗಳಿವೆ ಎಂದರು.
ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ ಡಾ. ಎಂ.ಸುರೇಶ್ ಬಾಬು, ಪ್ರಾಧ್ಯಾಪಕ ಡಾ.ವೈ.ಎಸ್.ರವಿಕುಮಾರ್, ಎಂಡೋಕ್ರೈನಾಲಜಿ ವಿಭಾಗದ ವೈದ್ಯರಾದ ಡಾ.ಲಕ್ಷ್ಮೀ ನಾಗೇಂದ್ರ, ಡಾ.ಅಜಯ್ ಹನುಮಂತು, ಡಾ.ಸಂಜನಾ, ಡಾ.ರಘು ಇತರರು ಇದ್ದರು.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net