ಬಡವರಿಗೆ ನೆರವಾಗುತ್ತಿರುವ ಧರ್ಮಸ್ಥಳ ಸಂಸ್ಥೆ

ಕೆ.ಆರ್.ನಗರ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಪಟ್ಟಣದ ಆಂಜನೇಯ ಬ್ಲಾಕ್, ಮದುವನಹಳ್ಳಿ ಬಡಾವಣೆ ಹಾಗೂ ಮಾವತ್ತೂರು ಗ್ರಾಮದ ಫಲಾನುಭವಿಗಳಿಗೆ ಜನಮಂಗಳ ಕಾರ್ಯಕ್ರಮದಡಿ ಮಂಜೂರಾಗಿರುವ ವಾಟರ್ ಬೆಡ್, ವ್ಹೀಲ್‌ಚೇರ್, ವಾಕಿಂಗ್ ಸ್ಟಿಕ್ ವಿತರಿಸಲಾಯಿತು.
ಕೆ.ಆರ್.ನಗರ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಪಟ್ಟಣದ ಆಂಜನೇಯ ಬ್ಲಾಕ್, ಮದುವನಹಳ್ಳಿ ಬಡಾವಣೆ ಹಾಗೂ ಮಾವತ್ತೂರು ಗ್ರಾಮದ ಫಲಾನುಭವಿಗಳಿಗೆ ಜನಮಂಗಳ ಕಾರ್ಯಕ್ರಮದಡಿ ಮಂಜೂರಾಗಿರುವ ವಾಟರ್ ಬೆಡ್, ವ್ಹೀಲ್‌ಚೇರ್, ವಾಕಿಂಗ್ ಸ್ಟಿಕ್ ವಿತರಿಸಲಾಯಿತು.
Published on
ಕೆ.ಆರ್.ನಗರ: ನಿರ್ಗತಿಕರು, ಬಡ ವರ್ಗದ ಕುಟುಂಬಗಳು ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಜನಮಂಗಳ ಕಾರ್ಯಕ್ರಮವನ್ನು ರೂಪಿಸಿ, ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಕೆ.ಸದಾನಂದ ದೇವಾಡಿಗ ತಿಳಿಸಿದರು.
ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಪಟ್ಟಣದ ಆಂಜನೇಯ ಬ್ಲಾಕ್, ಮದುವನಹಳ್ಳಿ ಬಡಾವಣೆ ಹಾಗೂ ಮಾವತ್ತೂರು ಗ್ರಾಮದ ಫಲಾನುಭವಿಗಳಿಗೆ ಜನಮಂಗಳ ಕಾರ್ಯಕ್ರಮದಡಿ ಮಂಜೂರಾಗಿರುವ ವಾಟರ್ ಬೆಡ್, ವ್ಹೀಲ್‌ಚೇರ್, ವಾಕಿಂಗ್ ಸ್ಟಿಕ್‌ಗಳನ್ನು ವಿತರಿಸಿ ಮಾತನಾಡಿದರು.
ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ಆರ್ಥಿಕ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ನಿರ್ಗತಿಕ ಕುಟುಂಬಗಳನ್ನು ಗುರ್ತಿಸಿ ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ರಾಜ್ಯದ ಒಂದು ಕೋಟಿಗೂ ಅಧಿಕ ಜನರಿಗೆ ಧರ್ಮಸ್ಥಳ ಯೋಜನೆಯ ಲಾಭ ತಲುಪಿದೆ. ವೈದ್ಯಕೀಯ ತರಬೇತಿ, ಉಚಿತ ವಿವಾಹ ಕಾರ್ಯಕ್ರಮದಂತಹ ಅನೇಕ ಮಾನವೀಯ ಯೋಜನೆ ನಡೆಸುತ್ತಿದ್ದು, ರಾಜ್ಯದ ವಿವಿಧ ಭಾಗದಲ್ಲಿ ಒಂದು ಕೋಟಿ ರೂ.ಗೂ ಅಧಿಕ ಮೊತ್ತದ ಉಪಕರಣಗಳನ್ನು ನೀಡಿಲಾಗಿದೆ ಎಂದು ತಿಳಿಸಿದರು.
ಅಂಗವಿಕಲರು, ಅನಾರೋಗ್ಯ ಪೀಡಿತರು, ಸಂಕಷ್ಟದಲ್ಲಿರುವವರಿಗೆ ಹಣಕಾಸಿನ ನೆರವು ನೀಡಲಾಗುತ್ತಿದ್ದು, ಅನೇಕ ಜನಪಯೋಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫಲಾನುಭವಿಗಳು ಯೋಜನೆ ಪ್ರಯೋಜನ ಸದುಪಯೋಗ ಪಡೆದುಕೊಳ್ಳಬೇಕು. ಡಾ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಕನಸಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಡವರಿಗೆ ನೆರವಾಗುತ್ತಿದ್ದು, ರಾಜ್ಯದ ಎಲ್ಲ ಜಿಲ್ಲೆಯನ್ನು ತಲುಪಿದೆ. ಈ ಯೋಜನೆ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಮಾಸಾಶನ, ವಾತ್ಸಲ್ಯ ಮನೆ, ವಾತ್ಯಲ್ಯ ಕಿಟ್ ಹೀಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಇದರ ಪ್ರಯೋಜನವನ್ನು ಅರ್ಹರು ಪಡೆದುಕೊಂಡು ಸಮಾಜದಲ್ಲಿ ನೆಮ್ಮದಿಯಿಂದ ಜೀವನ ನಡೆಸಬೇಕೆಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್, ಗ್ರಾಮದ ಮುಖಂಡರಾದ ಹೇಮಂತ್ ಕುಮಾರ್, ಸಣ್ಣೇಗೌಡ, ರವಿಕುಮಾರ್, ಗೋಪಾಲರಾಜ್ ಅರಸ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಮೇಲ್ವಿಚಾರಕ ರಜನಿಕಾಂತ್, ರವಿ, ಹರ್ಷಿತ್, ಕೃಷಿ ಮೇಲ್ವಿಚಾರಕ ಮಹದೇವಸ್ವಾಮಿ ಸೇರಿದಂತೆ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net