ಉದ್ಯೋಗ ಸೃಷ್ಟಿಸುವ ಧೈರ್ಯ ಬೆಳೆಸಿಕೊಳ್ಳಿ

ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಕೆ.ಬಿ.ಲಿಂಗರಾಜು ಉದ್ಘಾಟಿಸಿದರು. ಡಾ. ವೈ.ವಿ.ಗಂಗಾಧರ, ಡಾ. ದಿಲ್ಶಾದ್ ಬೇಗಂ, ಪ್ರೊ.ಪಿ.ಶಿವಣ್ಣ, ಡಾ. ನಿರಂಜನ ಬಾಬು ಇತರರಿದ್ದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಡಾ.ಕೆ.ಬಿ.ಲಿಂಗರಾಜು ಉದ್ಘಾಟಿಸಿದರು. ಡಾ. ವೈ.ವಿ.ಗಂಗಾಧರ, ಡಾ. ದಿಲ್ಶಾದ್ ಬೇಗಂ, ಪ್ರೊ.ಪಿ.ಶಿವಣ್ಣ, ಡಾ. ನಿರಂಜನ ಬಾಬು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಕೆ.ಬಿ.ಲಿಂಗರಾಜು ಸಲಹೆ
  • ವಿಶೇಷ ಉಪನ್ಯಾಸ, ಕೌಶಲ ಅಭಿವೃದ್ಧಿ ಪ್ರಮಾಣಪತ್ರ ವಿತರಣೆ
ಉದ್ಯೋಗಕ್ಕಾಗಿ ಕಾಯುವ ಬದಲು, ಉದ್ಯೋಗ ಸೃಷ್ಟಿಸುವ ಧೈರ್ಯ ಬೆಳೆಸಿಕೊಳ್ಳಿ ಎಂದು ಮೈಸೂರು ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಡಾ.ಕೆ.ಬಿ.ಲಿಂಗರಾಜು ಸಲಹೆ ನೀಡಿದರು.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಉದ್ಯಮಶೀಲತೆ ಅಭಿವೃದ್ಧಿ’ ಕುರಿತ ವಿಶೇಷ ಉಪನ್ಯಾಸ ಮತ್ತು ಕೌಶಲ ಅಭಿವೃದ್ಧಿ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಣ್ಣ ಅಂಗಡಿಯಿಂದಲೇ ಆರಂಭವಾದ ದೊಡ್ಡ ಕಂಪನಿಗಳು ಸಾವಿರಾರು ಜನರಿಗೆ ಉದ್ಯೋಗ ನೀಡಿವೆ. ನಿಮ್ಮ ಐಡಿಯಾ ಸಣ್ಣದಾಗಿದ್ದರೂ ಪರವಾಗಿಲ್ಲ, ಅದನ್ನು ಕಾರ್ಯರೂಪಕ್ಕೆ ತರುವ ಮನಸ್ಸು ಮುಖ್ಯ ಎಂದು ಅವರು ವಿದ್ಯಾರ್ಥಿನಿಯರಿಗೆ ಸ್ಫೂರ್ತಿ ನೀಡಿದರು.
ಇಂದು ಉದ್ಯಮ ಲೋಕಕ್ಕೆ ಪದವೀಧರರು ಬೇಕಾಗಿಲ್ಲ, ಕೌಶಲವುಳ್ಳ ಯುವ ಶಕ್ತಿ ಬೇಕಾಗಿದೆ. ನೀವು ಈಗಲೇ ಆ ಕೌಶಲ್ಯವನ್ನು ಅಭ್ಯಾಸ ಮಾಡಿದ್ದೀರಿ. ಇದು ನಿಮ್ಮನ್ನು ಇತರರಿಗಿಂತ ಒಂದು ಹೆಜ್ಜೆ ಮುಂದೆ ಇಡುತ್ತದೆ ಎಂದು ಹೇಳಿದರು.
ಮಹಿಳೆಯರು ಸಣ್ಣ ಪ್ರಮಾಣದ ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗುವ ಕಾಲ ಬಂದಿದೆ. ಚೇಂಬರ್ ಆಫ್ ಕಾಮರ್ಸ್ ಯಾವಾಗಲೂ ಯುವ ಉದ್ಯಮಿಗಳ ಜತೆಗೆ ನಿಲ್ಲುತ್ತದೆ. ನಿಮ್ಮಲ್ಲಿ ಯಾರಾದರೂ ಸ್ಪಾರ್ಟಪ್ ಆರಂಭಿಸಲು ಬಯಸಿದರೆ, ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲು ನಾವು ಸಿದ್ಧ ಎಂದು ಭರವಸೆ ನೀಡಿದರು.
ಮಹಾರಾಣಿ ಕಾಲೇಜು ಮಹಿಳಾ ಶಿಕ್ಷಣದಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದ ಅವರು, ಕೌಶಲ ಆಧಾರಿತ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕ ಡಾ. ವೈ.ವಿ.ಗಂಗಾಧರ ‘ಉದ್ಯಮಶೀಲತೆ ಅಭಿವೃದ್ಧಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಂಡ್ಯ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ದಿಲ್ಶಾದ್ ಬೇಗಂ, ಪ್ರಾಂಶುಪಾಲ ಪ್ರೊ.ಪಿ.ಶಿವಣ್ಣ, ಡಾ.ನಿರಂಜನ ಬಾಬು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net