2023ರ ಎನ್‌ಸಿಆರ್‌ಬಿ ವರದಿಯ ಪ್ರಕಾರ, ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 57,000. ದಲಿತ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ 2835. ಆದರೆ ವಾಸ್ತವದಲ್ಲಿ ಪೊಲೀಸರ ಬಳಿ ದಾಖಲಾಗದಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇನ್ನೂ ಅಧಿಕವಾಗಿದೆ. ಇಂದಿಗೂ ದಲಿತರ ಮತ್ತು ಮಹಿಳೆಯರ ವಿರುದ್ಧ ನಡೆಯುತ್ತಿರುವ ಈ ದೌರ್ಜನ್ಯಗಳಿಗೆ ಪುರೋಹಿತಶಾಹಿ ವ್ಯವಸ್ಥೆ, ಶ್ರೇಣಿಕೃತ ಸಾಮಾಜಿಕ ಪದ್ಧತಿ, ಪುರುಷ ಪ್ರಧಾನ ವ್ಯವಸ್ಥೆ ಮತ್ತು ಕೋಮುವಾದಿ ಮನಸ್ಥಿತಿಯೇ ಕಾರಣ ಎಂದು ಆರೋಪಿಸಿದರು.