ಪ್ರಾಂಗಣದಲ್ಲಿ ಭೂಮಿ ಹಗೆಯುವ ಕಾಮಗಾರಿ ಆರಂಭಗೊಂಡಿದ್ದು, ತಿರುಪತಿ ಮಾದರಿಯಲ್ಲಿ ದೇವಾಲಯದ ಪ್ರವೇಶದ್ವಾರದ ಬಳಿ ಸಾಲುಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಮಾಹಿತಿ ಕೇಂದ್ರ, ಶಾಶ್ವತ ಚಪ್ಪಲಿ ಇರಿಸುವ ಜಾಗ ನಿರ್ಮಾಣ, ಮಹಿಷಾಸುರ ಪ್ರತಿಮೆಯ ಸಮೀಪದಲ್ಲಿ ಟಿಕೆಟ್ ಕೌಂಟರ್‌ಗಳು ಮತ್ತು ಪ್ಲಾಜಾ ರೀತಿಯ ವ್ಯವಸ್ಥೆ ರೂಪಿಸಲಾಗುತ್ತಿದೆ. ಯೋಜನೆ ಅಡಿ ಬೆಟ್ಟದ ಮೇಲಿನ ಬಹುಮಹಡಿ ವಾಹನ ನಿಲುಗಡೆ, ನಂದಿ ಪ್ರತಿಮೆಯ ಬಳಿಯ ಮೆಟ್ಟಿಲುಗಳನ್ನೂ ನವೀಕರಿಸಲಾಗುತ್ತಿದೆ.