ಎಸ್‌ಐಆರ್ ಗಂಭೀರವಾಗಿ ಪರಿಗಣಿಸಿ : ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಕಾರ್ಯಕರ್ತರಿಗೆ ಕರೆ

ಮೈಸೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಬಿಜೆಪಿ ಎಸ್‌ಐಆರ್ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಎಸ್‌ಐಆರ್ ಮಾಹಿತಿ ಕೈಪಿಡಿಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಬಿಡುಗಡೆ ಮಾಡಿದರು.  ದತ್ತಾತ್ರೇಯ, ಟಿ.ಎಸ್. ಶ್ರೀವತ್ಸ, ನವೀನ್, ರಘು ಕೌಟಿಲ್ಯ ಹಾಗೂ ಇತರರು ಇದ್ದರು.
ಮೈಸೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಬಿಜೆಪಿ ಎಸ್‌ಐಆರ್ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಎಸ್‌ಐಆರ್ ಮಾಹಿತಿ ಕೈಪಿಡಿಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಬಿಡುಗಡೆ ಮಾಡಿದರು. ದತ್ತಾತ್ರೇಯ, ಟಿ.ಎಸ್. ಶ್ರೀವತ್ಸ, ನವೀನ್, ರಘು ಕೌಟಿಲ್ಯ ಹಾಗೂ ಇತರರು ಇದ್ದರು.
Published on
ಮೈಸೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯನ್ನು ಬಿಜೆಪಿ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸ ಬೇಕು. ಚುನಾವಣೆ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡಿದ್ದೇವೆಯೋ ಅದೇ ರೀತಿ ಎಸ್‌ಐಆರ್‌ನಲ್ಲೂ ಕೆಲಸ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಕರೆ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಎಸ್‌ಐಆರ್ ಕುರಿತು ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಜೂ.29 ರಿಂದ ಜು.30ರವರೆಗೆ ಎಸ್‌ಐಆರ್ ನಡೆಯಲಿದೆ. ಒಂದು ತಿಂಗಳ ಕಾಲ ನಡೆಯುವ ಎಸ್‌ಐಆರ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಈ ವಿಚಾರದಲ್ಲಿ ನಿರ್ಲಕ್ಷೃ ತೋರಿದರೆ ಪಕ್ಷ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರನ್ನು ಎಚ್ಚರಿಸಿದರು.
20 ವರ್ಷಗಳಿಂದ ಮತ ಹಾಕುತ್ತಿದ್ದೇನೆ, ನನ್ನನ್ನು ಮತದಾರರ ಪಟ್ಟಿಯಿಂದ ಕೈ ಬಿಡಲು ಹೇಗೆ ಸಾಧ್ಯ ಎಂಬ ಭ್ರಮೆ ಇದ್ದರೆ ಅಂತಹ ಭ್ರಮೆಯಿಂದ ಹೊರ ಬರಬೇಕು. ಪ್ರತಿಯೊಬ್ಬರು ಎಸ್‌ಐಆರ್ ಪ್ರಕ್ರಿಯೆಗೆ ಒಳಪಡುತ್ತಾರೆ. ಪ್ರತಿಯೊಬ್ಬ ಮತದಾರರಿಗೆ ಬಿಎಲ್‌ಒಗಳು ಎನ್ಯುಮರೇನಷ್ ಫಾರ್ಮ್ ನೀಡುತ್ತಾರೆ. ಪ್ರತಿಯೊಬ್ಬರು ಆ ಅರ್ಜಿಯನ್ನು ಭರ್ತಿ ಮಾಡಿ ನೀಡಬೇಕು. ಒಂದುವೇಳೆ ನೀಡದರೆ ಇದ್ದರೆ ಮತದಾರರ ಪಟ್ಟಿಯಿಂದ ಅಂತಹವರನ್ನು ಕೈ ಬಿಡಲಾಗುತ್ತದೆ. ನಂತರ ಎಷ್ಟೇ ಪ್ರಯತ್ನ ಪಟ್ಟರೂ ಮತದಾರರ ಪಟ್ಟಿಗೆ ನಿಮ್ಮ ಹೆಸರು ಸೇರ್ಪಡೆಗೊಳಿಸಲು ಸಾಧ್ಯವಿಲ್ಲ ಎಂದರು.
ಎಸ್‌ಐಆರ್ ಕುರಿತು ಜನಸಾಮಾನ್ಯರು ಮಾತ್ರವಲ್ಲ ಪಕ್ಷದ ಕಾರ್ಯಕರ್ತರಲ್ಲೂ ಮಾಹಿತಿಯ ಕೊರತೆ ಇದೆ. ಹೀಗಾಗಿ ಕಾರ್ಯಕರ್ತರು ಎಸ್‌ಐಆರ್ ಕುರಿತು ಸಮಗ್ರವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ರಾಜಕೀಯ ಪಕ್ಷವಾಗಿ ಇದು ನಮಗೆ ಅತ್ಯಂತ ಮುಖ್ಯವಾದ ಕೆಲಸ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಬಗ್ಗೆ ಜವಾಬ್ದಾರಿ ತೆಗೆದುಕೊಂಡ ನಮ್ಮ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಶೇ.60 ರಿಂದ 70 ರಷ್ಟು ಮತದಾನವಾಗುತ್ತದೆ. ಉಳಿದ ಮತಗಳು ನಕಲಿ ಆಗಿರಬ ಹುದು ಅಥವಾ ಊರು ಬಿಟ್ಟವರು, ಮೃತಪಟ್ಟರು ಆಗಿರಬಹದು. ಎಸ್‌ಐಆರ್ ಬಳಿಕ ನೈಜ ಮತದಾರರು ಮಾತ್ರ ಉಳಿಯುತ್ತಾರೆ. ಎಸ್‌ಐಆರ್ ಬಳಿಕ ಉಳಿಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ನಿರೀಕ್ಷೆ ಹೊಂದಿದ್ದೇವೆ. ಮುಂದಿನ ಚುನಾವಣೆಯಲ್ಲಿ ಶೇ.90 ರಷ್ಟು ಮತದಾನ ಆಗಲಿದೆ ಎಂದರು.
ಬಿಜೆಪಿಯ ಎಸ್‌ಐಆರ್ ರಾಜ್ಯ ಸಂಚಾಲಕ ದತ್ತಾತ್ರೇಯ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಬಿಎಲ್ಒಗಳನ್ನು ನೇಮಕ ಮಾಡಿದೆ. ಇವರು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇವರ ಜತೆಗೆ ಪಕ್ಷದಿಂದ ನೇಮಕವಾಗಿರುವ ಬಿಎಲ್‌ಎ-1, ಬಿಎಲ್‌ಎ-2ಗಳು ಎಸ್‌ಐಆರ್‌ಅನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಅರ್ಹ ಮತದಾರರು ಪಟ್ಟಿಗೆ ಕೈಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು ಎಂದರು.
ಅರ್ಹ ಮತದಾರರಿಗೆ ಎಸ್‌ಐಆರ್ ಕುರಿತು ಸಂಪೂರ್ಣ ಮಾಹಿತಿ ನೀಡಿ ಅವರನ್ನು ಎಸ್‌ಐಆರ್ ಪ್ರಕ್ರಿಯೆಗೆ ಒಳಪಡಿಸುವುದು ಬಿಎಲ್ಎ-1 ಹಾಗೂ ಬಿಎಲ್ಎ-2ಗಳ ಕರ್ತವ್ಯವಾಗಿದೆ. ಇವರ ಜತೆಗೆ ಪಕ್ಷದ ಕಾರ್ಯಕರ್ತರು ಸಹ ಸಕ್ರಿಯವಾಗಿ ತೊಡಗಿಸಿಕೊಳ್ಳ ಬೇಕು. ಎಸ್‌ಐಆರ್ ಯಶಸ್ವಿಯಾದರೆ ಮಾತ್ರ ಪಕ್ಷಕ್ಕೂ ಯಶಸ್ಸು ದೊರೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಎಸ್‌ಐಆರ್‌ಅನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇದೆ. ಹೀಗಾಗಿ ಎಸ್‌ಐಆರ್‌ಅನ್ನು ಬಿಜೆಪಿ ಸಹ ಗಂಭೀರವಾಗಿ ಪರಿಗಣಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ನವೀನ್, ರಘು ಕೌಟಿಲ್ಯ, ಮಾಜಿ ಸದಸ್ಯರಾದ ತೋಂಟದಾರ್ಯ, ಮಲ್ಲಿಕಾರ್ಜುನಪ್ಪ, ಸಿದ್ದರಾಜು, ಸುನಿಲ್ ಸುಬ್ರಮಣಿ, ಮಾಜಿ ಮೇಯರ್‌ಗಳಾದ ಸಂದೇಶ್ ಸ್ವಾಮಿ, ಶಿವಕುಮಾರ್, ಮಾಜಿ ಶಾಸಕರಾದ ನಿರಂಜನ್ ಕುಮಾರ್, ಹರ್ಷವರ್ಧನ್, ಅಪ್ಪಚ್ಚು ರಂಜನ್, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎನ್. ಮಹೇಶ್, ಎಂ. ರಾಜೇಂದ್ರ, ಬಿಜೆಪಿ ವಿಭಾಗೀಯ ಪ್ರಭಾರಿ ಸ್ವಾಮಿಮರುಳಾಪುರ, ಸಹ ಪ್ರಭಾರಿ ಇ.ಸಿ. ನಿಂಗರಾಜ್‌ಗೌಡ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net