ಶ್ರೀಪಾಲ್‌ರನ್ನು ಕಾಂಗ್ರೆಸ್ ವಜಾಗೊಳಿಸಲಿ

 ಒತ್ತಾಯ
ಒತ್ತಾಯ
Published on
ಮೈಸೂರು: ಕಾಂಗ್ರೆಸ್ ಹೆಸರನ್ನು ದುರುಪಯೋಗ ಪಡೆಸಿಕೊಂಡು ದಲಿತ ಅಧಿಕಾರಿಗಳನ್ನು ಹೆದರಿಸುತ್ತಿರುವ ಕಾಂಗ್ರೆಸ್ ಮುಖಂಡ ಶ್ರೀಪಾಲ್ ಅವರನ್ನು ಪಕ್ಷದಿಂದ ವಜಾಗೊಳಿಸುವಂತೆ ಮಾಜಿ ಮೇಯರ್ ಪುರುಷೋತ್ತಮ್ ಒತ್ತಾಯಿಸಿದರು.
ಶ್ರೀಪಾಲ್ ಕೆಲ ತಿಂಗಳ ಹಿಂದೆ ಸೆಸ್ಕ್‌ನ ಎಇಇ ಅನಿತಾ ಅವರಿಗೆ ಅವಾಚ್ಯ ಶಬ್ದದಿಂದ ಬೈದು, ಜಾತಿ ನಿಂದನೆ ಮಾಡಿ ಹಿನ್ನೆಲೆಯಲ್ಲಿ 11 ದಿನ ಜೈಲಿನಲ್ಲಿ ಇದ್ದು, ಈಗ ಜಾಮೀನಿನಲ್ಲಿ ಹೊರಗೆ ಬಂದಿದ್ದಾರೆ. ಅನಿತಾ ಅವರ ವಿಷಯ ತಿಳಿದ ತಕ್ಷಣ ಎಲ್ಲವನ್ನು ಪರಿಶೀಲಿಸಿ ಮಾಹಿತಿ ಪಡೆಯಲಾಗಿದೆ. ಕೂಡಲೇ ಕಾಂಗ್ರೆಸ್ ಶ್ರೀಪಾಲ್ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net