ಭ್ರಷ್ಟಾಚಾರ ನಿಯಂತ್ರಣಕ್ಕೆ ಸಮಿತಿ ಹೋರಾಟ

ಹುಣಸೂರು ನಗರದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ, ಇಂಡಿಯಾದ ತಾಲೂಕು ಘಟಕದ ಪದಾಧಿಕಾರಿಗಳನ್ನು ನೇಮಿಸಲಾಯಿತು. ಶ್ರೀ ಸಾಂಬಸದಾಶಿವಸ್ವಾಮೀಜಿ,  ಎಸ್.ಗುರುಸ್ವಾಮಿ, ಕೆ.ದಯಾನಂದ್, ಎಂ.ರವಿ, ಲೋಕೇಶ್‌ಕುಮಾರ್ ಇತರರಿದ್ದರು.
ಹುಣಸೂರು ನಗರದಲ್ಲಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ, ಇಂಡಿಯಾದ ತಾಲೂಕು ಘಟಕದ ಪದಾಧಿಕಾರಿಗಳನ್ನು ನೇಮಿಸಲಾಯಿತು. ಶ್ರೀ ಸಾಂಬಸದಾಶಿವಸ್ವಾಮೀಜಿ, ಎಸ್.ಗುರುಸ್ವಾಮಿ, ಕೆ.ದಯಾನಂದ್, ಎಂ.ರವಿ, ಲೋಕೇಶ್‌ಕುಮಾರ್ ಇತರರಿದ್ದರು.
Published on
ಹುಣಸೂರು : ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದ್ದು, ಅಪರಾಧ ಮತ್ತು ಅಪರಾಧಿ ಎರಡೂ ಸಮಾಜದ ಸ್ವಾಸ್ಥ್ಯಕ್ಕೆ ಕಂಟಕವಾಗುತ್ತಿದೆ ಎಂದು ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕಾರ್ಯಾಚರಣೆ ಸಮಿತಿ ಇಂಡಿಯಾ(ಎನ್‌ಎಸಿಒಸಿಐ)ದ ರಾಜ್ಯಾಧ್ಯಕ್ಷ ಎಸ್.ಗುರುಸ್ವಾಮಿ ಬೇಸರಿಸಿದರು.
ನಗರದ ಗುರುಬೂದಿ ಮಂಗಳಮಂಟಪ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ, ಇಂಡಿಯಾದ ತಾಲೂಕು ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದರು.
ಕಂದಾಯ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರವೆಂಬ ಪೆಡಂಭೂತ ಸಾರ್ವಜನಿಕರ ಜೀವ ಹಿಂಡುತ್ತಿದೆ. ಅಪರಾಧ ಮತ್ತು ಅಪರಾಧಿ ಎರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಪ್ರಶ್ನಿಸುವವರು ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತದೆ ಎನ್ನುವುದಕ್ಕೆ ನಾವೆಲ್ಲರೂ ಅನುಭವಿಸುತ್ತಿರುವುದೇ ಜ್ವಲಂತ ಉದಾಹರಣೆಯಾಗಿದೆ. ಸಮಿತಿಯು ಈ ನಿಟ್ಟಿನಲ್ಲಿ ದೇಶಾದ್ಯಂತ 28 ಸಾವಿರ ಸದಸ್ಯರನ್ನೊಳಗೊಂಡು ಭ್ರಷ್ಟಾಚಾರ ನಿಯಂತ್ರಣಕ್ಕೆ ಹೋರಾಟ ನಡೆಸಿದ್ದೇವೆ ಎಂದರು.
ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕರಲ್ಲಿ ಕನಿಷ್ಠ ಅರಿವನ್ನಾದರೂ ಮೂಡಿಸಬೇಕಿದೆ. ದರ್ಪ, ದೌರ್ಜನ್ಯ ನಮ್ಮ ನಡೆಯಾಗಬಾರದು. ನಮ್ಮ ಜವಾಬ್ದಾರಿಗಳನ್ನು ಅರಿತು ಜನರನ್ನು ಭ್ರಷ್ಟಾಚಾರದ ಬಲೆಯಿಂದ ಬಿಡಿಸಲು ಶ್ರಮಿಸೋಣವೆಂದರು.
ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವಸ್ವಾಮೀಜಿ ಮಾತನಾಡಿ, ಸಾಮಾಜಿಕ ಸೇವೆ ಮಾಡಲು ನಮ್ಮಲ್ಲಿ ನಿಸ್ವಾರ್ಥ ಮನೋಭಾವ ರೂಢಿಸಿಕೊಳ್ಳಬೇಕು. ಸಾಮಾಜಿಕ ಕಳಕಳಿಯೊಂದಿಗೆ ದಿನನಿತ್ಯ ಸಾರ್ವಜನಿಕರು ಅನುಭವಿಸುತ್ತಿರುವ ನೋವು ಕಷ್ಟಗಳಿಗೆ ಸ್ಪಂದಿಸಲು ಸಮಿತಿ ಮುಂದಾಗಿರುವುದು ಸ್ವಾಗತಾರ್ಹ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ದಯಾನಂದ್ ಸಮಿತಿಯ ಉದ್ದೇಶಗಳನ್ನು ತಿಳಿಸಿದರು. ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ರವಿ, ಕಾರ್ಯಾಧ್ಯಕ್ಷ ಜೆ.ಪಿ.ಶಿವಣ್ಣ, ಉಪಾಧ್ಯಕ್ಷರಾದ ಎಸ್.ಬಿ.ಮೂರ್ತಿ, ಮಹದೇವಪ್ಪ, ರಾಮಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಶಿವಮಲ್ಲಪ್ಪ, ಸಮಿತಿ ರಾಜ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಎನ್.ಲೋಕೇಶ್‌ಕುಮಾರ್, ಮೈಸೂರು ವಿಭಾಗದ ಅಧ್ಯಕ್ಷ ಎಂ.ಆರ್.ಶಿವಕುಮಾರ್, ಮೈಸೂರು ಜಿಲ್ಲಾಧ್ಯಕ್ಷ ದೇವರಾಜಪ್ಪ, ಕೆ.ಆರ್.ನಗರ ತಾಲೂಕು ಅಧ್ಯಕ್ಷೆ ವೇದಾವತಿ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net