ವಿದ್ಯಾರ್ಥಿಗಳಿಗೆ ‘ಸ್ವಚ್ಛ ಮೈಸೂರು ರಸಪ್ರಶ್ನೆ’

 ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸ್ವಚ್ಛ  ಮೈಸೂರು ರಸಪ್ರಶ್ನೆ’ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಮೈಸೂರಿನ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಸ್ವಚ್ಛ ಮೈಸೂರು ರಸಪ್ರಶ್ನೆ’ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.
Published on
ಮೈಸೂರು: ಸ್ವಚ್ಛ ಸರ್ವೇಕ್ಷಣೆ ಅಂಗವಾಗಿ ನಗರ ಪಾಲಿಕೆಯು ಎಕ್ಸೆಲ್ ಪಬ್ಲಿಕ್ ಶಾಲೆಯ ಸಹಯೋಗದೊಂದಿಗೆ ನಗರದ ಕಲಾಮಂದಿರದಲ್ಲಿ ಶನಿವಾರ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ‘ಸ್ವಚ್ಛ ಮೈಸೂರು ರಸಪ್ರಶ್ನೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಲವು ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಾಲಾ ವಿಭಾಗದಲ್ಲಿ ಕುವೆಂಪುನಗರದ ಕರ್ನಾಟಕ ಪಬ್ಲಿಕ್ ಶಾಲೆಯ ಎ. ಜಾಹ್ನವಿ ಯಾದವ್, ಎ.ಎಸ್. ತಕ್ಷಯ್ (ಪ್ರಥಮ), ಬೇಡನ್ ಪೋವಲ್ ಶಾಲೆಯ ವಿ. ಪ್ರಥಮ್, ಎಸ್. ವರ್ಣಿತಾ (ದ್ವಿತೀಯ), ಆಚಾರ್ಯ ವಿದ್ಯಾಕುಲದ ಎ.ಜಿ. ದೈವಿಕ್, ಚಿನ್ಮಯಿ ಎ. ನಾಯಕ್ (ತೃತೀಯ), ಕಾಲೇಜು ವಿಭಾಗದಲ್ಲಿ ಮಹಾರಾಜ ಕಾಲೇಜಿನ ಎ.ಎಸ್. ಆದರ್ಶ್, ಪಿ. ಹಿಮಂತ್ (ಪ್ರಥಮ), ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ಡಿ.ಎಸ್. ಸಹನಾ, ಬಿ.ಕೆ. ಹರ್ಷಿತಾ (ದ್ವಿತೀಯ), ತೋಟಗಾರಿಕೆ ಮಹಾವಿದ್ಯಾಲಯದ ಮಂಜುನಾಥ್ ಪೂಜಾರ್, ಜಿ.ಎಂ.ಯಶ್ವಂತ್ (ತೃತೀಯ) ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಕೆ.ಎಸ್. ಮೃತ್ಯುಂಜಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಮೀನಾಕ್ಷಿ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net