ನಾಲ್ವಡಿ ಸಾಧನೆ ಸಾರಿದ ಸಾರೋಟುಗಳು

ಗಮನ ಸೆಳೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರ ಮೆರವಣಿಗೆ
ಗಮನ ಸೆಳೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರ ಮೆರವಣಿಗೆ
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರ ಗಮನ ಸೆಳೆದ ಮೆರವಣಿಗೆ
  • ನಾಲ್ವಡಿ ಅವರ ಸಾಧನೆ, ಅಭಿವೃದ್ಧಿ ಕಾರ್ಯಗಳ ಕುರಿತು ಗುಣಗಾನ
  • ಸಾಂಸ್ಕೃತಿಕ ವೈಭವ ಮತ್ತು ನಾಲ್ವಡಿ ಅವರ ಆಡಳಿತ ಸಾಧನೆಗಳ ಸ್ಮರಣೆ
ಮೈಸೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ನಗರದ ವಿವಿಧೆಡೆ ಆಚರಿಸಲಾಯಿತು.
ನಾಲ್ವಡಿ ಅವರ ಸಾಧನೆ, ಅಭಿವೃದ್ಧಿ ಕಾರ್ಯಗಳ ಕುರಿತು ಗುಣಗಾನ ಮಾಡಲಾಯಿತು. ನಗರದ ವಿವಿಧ ರಸ್ತೆಗಳಲ್ಲಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಡೊಳ್ಳು, ಕಂಸಾಳೆ, ಗಾರುಡಿ ಗೊಂಬೆಗಳ ನೃತ್ಯದೊಂದಿಗೆ ನಾಲ್ವಡಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ವಿವಿಧೆಡೆ ಅನ್ನಸಂತಪರ್ಣೆ, ಶಾಲಾ-ಕಾಲೇಜುಗಳಲ್ಲಿ ವಿಚಾರ ಸಂಕಿರಣ ನಡೆಸಿ ಸ್ಮರಿಸಲಾಯಿತು.
ಅರಸು ಮಂಡಳಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ ಗಮನ ಸೆಳೆಯಿತು. ಸಾಂಸ್ಕೃತಿಕ ವೈಭವ ಮತ್ತು ನಾಲ್ವಡಿ ಅವರ ಆಡಳಿತ ಸಾಧನೆಗಳ ಸ್ಮರಣೆಯೊಂದಿಗೆ ಆಕರ್ಷಿಸಿತು. ಮೆರವಣಿಗೆಗೆ ಕಂಸಾಳೆ, ವೀರಗಾಸೆ, ಹರಿನಾಮ ಸಂಕೀರ್ತನೆ ತಂಡಗಳು ಮೆರುಗು ನೀಡಿದವು. ನಾಲ್ವಡಿ ಸಾಧನೆ ಬಿಂಬಿಸುವ ಬ್ಯಾನರ್ ಹೊತ್ತ ಸಾರೋಟುಗಳು ಸಾರ್ವಜನಿಕರ ಗಮನ ಸೆಳೆದವು.
ಶ್ರೀ ಚಾಮರಾಜೇಂದ್ರ ಸ್ಕೂಲ್ ಾರ್ ಎಕ್ಸಲೆನ್ಸ್‌ನಿಂದ ಆರಂಭವಾದ ಮೆರವಣಿಗೆ ಕೃಷ್ಣರಾಜ ಬುಲೇವಾರ್ಡ್ ರಸ್ತೆ, ವಾಣಿ ವಿಲಾಸ ರಸ್ತೆ, ವಾಧವರಾವ್ ವೃತ್ತ ಹಾಗೂ ಸಯ್ಯಜಿರಾವ್ ರಸ್ತೆ ವಾರ್ಗವಾಗಿ ಸಾಗಿಬಂದು ಕೃಷ್ಣರಾಜ ವೃತ್ತದಲ್ಲಿ ಕೊನೆಗೊಂಡಿತು.
ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಶ್ರೀ ಚಾಮರಾಜೇಂದ್ರ ಸ್ಕೂಲ್ ಾರ್ ಎಕ್ಸಲೆನ್ಸ್ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಉದ್ಘಾಟಿಸಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಾತನಾಡಿ, ನಾಲ್ವಡಿಯವರ ಅಭಿವೃದ್ಧಿ ಪರ ಆಡಳಿತ ಇಂದಿಗೂ ಜನಮನಗಳಲ್ಲಿ ಜೀವಂತವಾಗಿದೆ. ಅವರ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪ್ರತಿ ತಿಂಗಳು ನಾಲ್ವಡಿ ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಅರಸು ಬೋರ್ಡಿಂಗ್ ಶಾಲೆಯ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂ.ವಿದ್ಯಾರ್ಥಿವೇತನ ನೀಡಲಾಗುವುದು ಎಂದುಘೋಷಿಸಿದರು.
ನಾಲ್ವಡಿ ಜಯಂತಿಂು ದಿನವಾಗಿರುವುದರಿಂದ ಯಾರ ವಿರುದ್ಧವೂ ವಾತನಾಡಲ್ಲ. ರಾಜ್ಯ ಈಗಾಗಲೇ ಆರ್ಥಿಕ ಸವಾಲು ಎದುರಿಸುತ್ತಿದ್ದು, ಹೊಸ ಸರ್ಕಾರ ಅವುಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ರಾಜ್ಯದ ಹಲವೆಡೆ ರಸ್ತೆಗಳು ಹದಗೆಟ್ಟಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ ವಾತನಾಡಿ, ನಾಲ್ವಡಿಯವರು ಆಡಳಿತದ ಮೂಲಕ ಜಗತ್ತಿಗೆ ವಾದರಿಯಾದವರು. ಅಸ್ಪಶ್ಯತೆ ನಿವಾರಣೆ, ಮೀಸಲಾತಿ ಸೇರಿದಂತೆ ಹಲವು ಸಾವಾಜಿಕ ಸುಧಾರಣಾ ಕ್ರಮ ಅನುಷ್ಠಾನಕ್ಕೆ ತರುವ ಮೂಲಕ ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದರು. ಶಿಕ್ಷಣ, ನೀರಾವರಿ, ವಿದ್ಯುತ್ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಮೈಸೂರು ಸಂಸ್ಥಾನವನ್ನು ಮೊದಲ ಸ್ಥಾನಕ್ಕೆ ತಂದಿದ್ದರು. ಇದರೊಂದಿಗೆ ಅವರ ಆಡಳಿತ ಇಂದಿಗೂ ವಾದರಿಯಾಗಿದೆ ಎಂದರು.
ಮಳವಳ್ಳಿ ಮಂಟೇಸ್ವಾಮಿ ಮಠದ ಪೀಠಾಧಿಪತಿ ಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ಧಲಿಂಗರಾಜೇ ಅರಸ್, ಜ್ಞಾನಾನಂದ ಚನ್ನರಾಜೇ ಅರಸ್, ವರುಣ್ ಲಿಂಗರಾಜೇ ಅರಸ್, ಬಿ.ಪಿ.ಭರತ್ ಅರಸ್, ಅರಸು ಮಂಡಳಿ ಅಧ್ಯಕ್ಷ ಶ್ರೀಕಂಠರಾಜೇ ಅರಸ್, ಸುಂದರ್ ರಾಜೇ ಅರಸ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net