ರೈಲುಗಳ ಸೇವೆಯಲ್ಲಿ ಬದಲಾವಣೆ

ರೈಲು ಸೇವೆಗಳು
ರೈಲು ಸೇವೆಗಳು
Published on

ಪ್ರಮುಖ ಮುಖ್ಯಾಂಶಗಳು

  • ಮಲ್ಲಸಂದ್ರ, ಗುಬ್ಬಿ ನಿಲ್ದಾಣಗಳ ಲೆವೆಲ್ ಕ್ರಾಸಿಂಗ್ ಕಾಮಗಾರಿ
ಮೈಸೂರು: ಬೆಂಗಳೂರು ವಿಭಾಗದ ಮಲ್ಲಸಂದ್ರ ಮತ್ತು ಗುಬ್ಬಿ ನಿಲ್ದಾಣಗಳ ನಡುವೆ ಇರುವ ಲೆವೆಲ್ ಕ್ರಾಸಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಕೆಳಕಂಡ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. 

ರೈಲುಗಳ ಸಂಚಾರ ರದ್ದು: 

ಚಿಕ್ಕಮಗಳೂರು-ಯಶವಂತಪುರ- ಚಿಕ್ಕಮಗಳೂರು ದೈನಂದಿನ ಎಕ್ಸ್‌ಪ್ರೆಸ್( ರೈಲು ಸಂಖ್ಯೆ 16239/16240) ಮತ್ತು ಬೆಂಗಳೂರು-ಮೈಸೂರು ಒಡೆಯರ್ ದೈನಂದಿನ ಎಕ್ಸ್‌ಪ್ರೆಸ್ ರೈಲು(ರೈಲು ಸಂಖ್ಯೆ 12614)ಗಳನ್ನು  ಏ.8 ಮತ್ತು 15ರಂದು ರದ್ದುಗೊಳಿಸಲಾಗಿದೆ.

ರೈಲುಗಳ ಸಂಚಾರ ಭಾಗಶಃ ರದ್ದು:

ಏ.8, 11, 12 ಮತ್ತು 15ರಂದು ತಾಳಗುಪ್ಪ -ಬೆಂಗಳೂರು ಎಕ್ಸ್‌ಪ್ರೆಸ್ ರೈಲು(ರೈಲು ಸಂಖ್ಯೆ 20652) ಅರಸೀಕೆರೆ ಮತ್ತು ಬೆಂಗಳೂರು ನಡುವೆ ರದ್ದಾಗಲಿದೆ. ಈ ರೈಲು ಅರಸೀಕೆರೆಯಲ್ಲಿ ತನ್ನ ಪ್ರಯಾಣ ಮುಕ್ತಾಯಗೊಳಿಸಲಿದೆ.
ಏ.8, 11, 12 ಮತ್ತು 15 ರಂದು ಬೆಂಗಳೂರು-ಧಾರವಾಡ ಸಿದ್ಧಗಂಗಾ ಎಕ್ಸ್‌ಪ್ರೆಸ್(ರೈಲು ಸಂಖ್ಯೆ 12725) ಬೆಂಗಳೂರು ಮತ್ತು ಅರಸೀಕೆರೆ ನಡುವೆ ರದ್ದಾಗಲಿದೆ. ಇದು ಬೆಂಗಳೂರಿನ ಬದಲಿಗೆ ಅರಸೀಕೆರೆಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಏ.8 ಮತ್ತು 15 ರಂದು ಧಾರವಾಡ- ಬೆಂಗಳೂರು ಸಿದ್ಧಗಂಗಾ ಎಕ್ಸ್‌ಪ್ರೆಸ್(ರೈಲು ಸಂಖ್ಯೆ 12726) ಅರಸೀಕೆರೆ ಮತ್ತು ಬೆಂಗಳೂರು ನಡುವೆ ರದ್ದಾಗಲಿದ್ದು, ಅರಸೀಕೆರೆಯಲ್ಲಿ ಪ್ರಯಾಣ ಮುಕ್ತಾಯಗೊಳಿಸಲಿದೆ.

ರೈಲುಗಳ ಮಾರ್ಗ ಬದಲಾವಣೆ:

ಏ.7 ಮತ್ತು 14ರಂದು ವಾಸ್ಕೋಡಗಾಮ ನಿಲ್ದಾಣದಿಂದ ಹೊರಡುವ ರೈಲು(17310) ವಾಸ್ಕೋಡಗಾಮ ಯಶವಂತಪುರ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ತಪ್ಪಿರುತ್ತದೆ.
2. ಏ.7 ಮತ್ತು 14ರಂದು ವೇಲಂಕಣ್ಣಿಯಿಂದ ಹೊರಡುವ ರೈಲು ಸಂಖ್ಯೆ 17316 ವೇಲಂಕಣ್ಣಿ ವಾಸ್ಕೋಡಗಾಮ ವೀಕ್ಲಿ ಎಕ್ಸ್‌ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಹೀಗಾಗಿ ಈ ರೈಲು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಏ.8 ಮತ್ತು 15ರಂದು ಹೊರಡುವ ರೈಲು (ಸಂಖ್ಯೆ 20689) ಯಶವಂತಪುರ - ಶಿವಮೊಗ್ಗ ಡೈಲಿ ಎಕ್ಸ್‌ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ, ಅರಸೀಕೆರೆ  ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತುಮಕೂರು ಮತ್ತು ತಿಪಟೂರಿನಲ್ಲಿ ನಿಲುಗಡೆ ಇರುವುದಿಲ್ಲ.
ಏ.8, 15ರಂದು ಪ್ರಾರಂಭವಾಗುವ ರೈಲು (ಸಂಖ್ಯೆ 20676) ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮೈಸೂರು, ಹೊಳೆನರಸೀಪುರ, ಹಾಸನ, ಅರಸೀಕೆರೆ ಮೂಲಕ ಚಲಿಸಲಿದೆ. ಪಾಂಡವಪುರದಿಂದ ತಿಪಟೂರಿನವರೆಗೆ ನಿಲುಗಡೆ ಇರುವುದಿಲ್ಲ.

ರೈಲುಗಳ ನಿಯಂತ್ರಣ:

ಏ.10 ಮತ್ತು 11ರಂದು ವಾಸ್ಕೋಡಗಾಮದಿಂದ ಹೊರಡುವ ರೈಲು (ಸಂಖ್ಯೆ 17310) ವಾಸ್ಕೋಡಗಾಮ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.
ಏ.11 ಮತ್ತು 12ರಂದು ತೆರಳುವ ರೈಲು (ಸಂಖ್ಯೆ 20689) ಯಶವಂತಪುರ- ಶಿವಮೊಗ್ಗ ಎಕ್ಸ್‌ಪ್ರೆಸ್ ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಣವಾಗಲಿದೆ.

ರೈಲುಗಳ ಮರುವೇಳಾಪಟ್ಟಿ ಹೊಂದಾಣಿಕೆ:

ಏ.6 ಮತ್ತು 13ರಂದು ರೈಲು (ಸಂಖ್ಯೆ 19667) ಉದಯಪುರ- ಮೈಸೂರು ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲು ಉದಯಪುರದಿಂದ 200 ನಿಮಿಷ ತಡವಾಗಿ ಹೊರಡಲಿದೆ.
ಏ.6 ಮತ್ತು 13ರಂದು ರೈಲು(ಸಂಖ್ಯೆ 22497) ಶ್ರೀಗಂಗಾನಗರ ತಿರುಚ್ಚಿರಾಪಳ್ಳಿ ಹಮ್‌ಸಫರ್ ಎಕ್ಸ್‌ಪ್ರೆಸ್ ಶ್ರೀಗಂಗಾನಗರದಿಂದ 150 ನಿಮಿಷ ತಡವಾಗಿ ಹೊರಡಲಿದೆ.
ಏ.8 ಮತ್ತು 15ರಂದು ರೈಲು (ಸಂಖ್ಯೆ 12649) ಯಶವಂತಪುರ ಹಜರತ್ ನಿಜಾಮುದ್ದೀನ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಯಶವಂತಪುರದಿಂದ 30 ನಿಮಿಷ ತಡವಾಗಿ ಹೊರಡಲಿದೆ.
ಏ.8 ಮತ್ತು 15ರಂದು ರೈಲು (ಸಂಖ್ಯೆ 12777) ಹುಬ್ಬಳ್ಳಿ ತಿರುವನಂತಪುರಂ ನಾರ್ತ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹುಬ್ಬಳ್ಳಿಯಿಂದ 60 ನಿಮಿಷ ತಡವಾಗಿ ಹೊರಡಲಿದೆ ಮತ್ತು ಮಾರ್ಗಮಧ್ಯೆ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net