ಪಿರಿಯಾಪಟ್ಟಣ: ಮೈಸೂರಿನ ರವಿಸಂತು ಬಳಗದ ವತಿಯಿಂದ ಕೊಡಮಾಡುವ ರಾಜಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಪ್ರಶಸ್ತಿಗೆ ಮಾಧ್ಯಮ ಕ್ಷೇತ್ರದಿಂದ ವಿಜಯವಾಣಿ ದಿನಪತ್ರಿಕೆಯ ಬೆಟ್ಟದಪುರ ವರದಿಗಾರ ಸಿ.ಜಿ.ಪುನೀತ್ ಆಯ್ಕೆಯಾಗಿದ್ದಾರೆ. ಮೇ 23ರಂದು ಮೈಸೂರಿನ ಟೌನ್‌ಹಾಲ್‌ನಲ್ಲಿ ಆಯೋಜಿಸಿರುವ ರವಿಸಂತು ಬಳಗದ ಆರನೇ ವರ್ಷದ ಸಂಭ್ರಮಾಚರಣೆ, ಗೀತನಮನ ಮತ್ತು ರಾಜಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರವಿಸಂತು ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.