ಎಚ್.ಡಿ.ಕೋಟೆ: ತಾಲೂಕಿನ ಉದ್ದೂರು ಸಮೀಪ ಕಬಿನಿ ಹಿನ್ನೀರಿನ ದಡದಲ್ಲಿ ಸೋಮವಾರ ಸಂಜೆ ನಿಲ್ಲಿಸಿದ ಕಾರೊಂದು ನೀರಿನಲ್ಲಿ ಮುಳುಗಿದ್ದು, ನಂತರ ರಾತ್ರಿ ಕ್ರೇನ್ ಸಹಾಯದ ಮೂಲಕ ದಡಕ್ಕೆ ತರಲಾಗಿದೆ.
ಎಚ್.ಡಿ.ಕೋಟೆ ಪಟ್ಟಣದ ಚಂದ್ರು ಎಂಬುವರು ಸೋಮವಾರ ಸಂಜೆ ಕಬಿನಿ ಹಿನ್ನೀರು ವೀಕ್ಷಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ದಡದಲ್ಲಿ ಕಾರು ನಿಲ್ಲಿಸಿ ಹ್ಯಾಂಡ್ ಬ್ರೇಕ್ ಹಾಕಿ ಕಬಿನಿ ಹಿನ್ನೀರಿನ ಅಕ್ಕಪಕ್ಕ ಹೋಗಿದ್ದಾರೆ. ಆದರೆ ಇಳಿಜಾರು ಪ್ರದೇಶ ಆಗಿದ್ದರಿಂದ ಕಾರು ಮುಂದೆ ಚಲಾಯಿಸಿ ನೀರಿನಲ್ಲಿ ಮುಳುಗಿದೆ.
ಕಾರಿನ ಮಾಲೀಕ ಕಾರು ನಿಲ್ಲಿಸಿದ ಸ್ಥಳಕ್ಕೆ ಬರುವಷ್ಟರಲ್ಲಿ ಕಾರು ನೀರಿನಲ್ಲಿ ಮುಳುಗಿರುವುದು ಕಂಡು ತಕ್ಷಣ ಕ್ರೇನ್ ತರಿಸಿ ಅದರ ಸಹಾಯದ ಮೂಲಕ ಕಾರನ್ನು ನೀರಿನಿಂದ ಹೊರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ವಿಷಯ ತಿಳಿದ ಅಂತರಸಂತೆ ಪೊಲೀಸ್ ಠಾಣೆ ಎಸ್‌ಐ ಚಂದ್ರಹಾಸನ್ ಕೂಡಲೇ ಸ್ಥಳ್ಕಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂದೆ ಹೀಗಾಗದಂತೆ ಎಚ್ಚರ ವಹಿಸುವಂತೆ ಕಾರಿನ ಮಾಲೀಕರಿಗೆ ಸೂಚನೆ ನೀಡಿದ್ದಾರೆ.