ಕಾಲೇಜು ವಿದ್ಯಾರ್ಥಿಗಳಿಂದ ರಕ್ತದಾನ

ತಿ.ನರಸೀಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಎನ್.ಕೃಷ್ಣೇಗೌಡ, ಸಿದ್ದೇಗೌಡ, ಜಯಕುಮಾರ್, ಡಾ.ಎಚ್.ವಿ.ಉದಯಕುಮಾರ್ ಇತರರು ಇದ್ದರು.
ತಿ.ನರಸೀಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಎನ್.ಕೃಷ್ಣೇಗೌಡ, ಸಿದ್ದೇಗೌಡ, ಜಯಕುಮಾರ್, ಡಾ.ಎಚ್.ವಿ.ಉದಯಕುಮಾರ್ ಇತರರು ಇದ್ದರು.
Published on
ತಿ.ನರಸೀಪುರ: ಕಾಲೇಜು ವಿದ್ಯಾರ್ಥಿಗಳಿಗೆ ರಕ್ತದಾನ ಮಹತ್ವವನ್ನು ತಿಳಿಸಲು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ಲಯನ್ ಸಂಸ್ಥೆ, ಮೈಸೂರಿನ ಜೀವಧಾರ ಬ್ಲಡ್ ಬ್ಯಾಂಕ್, ಯೂತ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಕಾಲೇಜಿನ 95 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲಯನ್ ಸಂಸ್ಥೆಯ ಐಪಿಎಂಡಿಸಿಸಿ ಅಂಡ್ ನಿಕಟ ಪೂರ್ವ ಜಿಲ್ಲಾ ಪ್ರಾಂತಪಾಲ ಡಾ.ಎನ್.ಕೃಷ್ಣೇಗೌಡ ಮಾತನಾಡಿ, ದಾನಗಳಲ್ಲಿ ರಕ್ತದಾನ ಶ್ರೇಷ್ಠದಾನವಾಗಿದೆ, ಯುವಕರು ರಕ್ತದಾನ ಮಾಡುವುದರಿಂದ ಅಪಘಾತ ಹಾಗೂ ಅನಾರೋಗ್ಯ ಸಂದರ್ಭದಲ್ಲಿ ಜೀವ ಉಳಿಸಿದ ಪುಣ್ಯಸಿಗಲಿದೆ ಎಂದರು.
ಲಯನ್ಸ್ ಸಿದ್ದೇಗೌಡ, ಎಂ.ಜಯಕುಮಾರ್. ಜೀವಧಾರ ಬ್ಲಡ್ ಬ್ಯಾಂಕ್ ಎಂ.ಡಿ ಗಿರೀಶ್, ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ಉದಯಕುಮಾರ್, ಎಚ್‌ಒಡಿ ದೇವರಾಜೇಗೌಡ, ಜೆ.ಎಸ್, ಐಕ್ಯೂಎಸಿ ಡಾ. ಅಮೀತ್, ಬಿ.ಎಂ,ರಾಮಮೂರ್ತಿ, ಕೆಂಪರಾಜು.ಆರ್, ಮಹೇಶ್. ಡಾ. ಕೆ.ಕೆ.ಮುತ್ತಮ್ಮ, ಹಾಗೂ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net