ಬೆಟ್ಟದಪುರ: ಬೆಟ್ಟದಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬುಧವಾರ ಮೃತಪಟ್ಟಿದ್ದಾರೆ.
ಸಮೀಪದ ಹರೀನಹಳ್ಳಿ ಗ್ರಾಮದ ಜಗದೀಶ್(66) ಮೃತ ಪಟ್ಟವರು.
ಜಗದೀಶ್ ಅವರು ಪಿರಿಯಾಪಟ್ಟಣ ಕಡೆಯಿಂದ ಬೆಟ್ಟದಪುರ ಕಡೆಗೆ ಮುಖ್ಯರಸ್ತೆಯಲ್ಲಿ ಬರುವಾಗ ಇಲ್ಲಿನ ಡಿಟಿಎಂಎನ್ ಶಾಲಾ ಮುಂಭಾಗ ಹಿಂಬದಿಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಬಸ್‌ಗೆ ಸಿಲುಕಿ ತಲೆ, ಮೈ ಕೈಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿ ರಸ್ತೆಗೆ ಬಿದ್ದರು.
ಗಾಯಾಳುವನ್ನು ಆಂಬುಲೆನ್ಸ್‌ನಲ್ಲಿ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆ ಕಳುಹಿಸಿಕೊಡಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಪುತ್ರ ಎಚ್.ಜೆ.ದೀಲಿಪ್ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.