ಬೈಕ್ ಕಳ್ಳನ ಬಂಧನ

ಬೈಕ್ ಕಳ್ಳತನ ಆರೋಪಿ ರಂಜನ್.
ಬೈಕ್ ಕಳ್ಳತನ ಆರೋಪಿ ರಂಜನ್.
Published on
ಹನಗೋಡು: ಬೈಕ್‌ಗಳನ್ನು ಕದಿಯುತ್ತಿದ್ದ ಕಳ್ಳನನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹನಗೋಡು ಹೋಬಳಿಯ ತಟ್ಟೆಕೆರೆ ಗ್ರಾಮದ ರಂಜನ್ ಅಲಿಯಾಸ್ ರಂಬ್ (38) ಬಂಧಿತ ಆರೋಪಿ. ಈತ ಹಲವು ದಿನಗಳಿಂದ ಬೈಕ್ ಕಳ್ಳತನ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಮಾ.22ರಂದು ರಾತ್ರಿ ಹನಗೋಡು ಕೊಳವಿಗೆ ರಸ್ತೆಯಲ್ಲಿರುವ ಚಿಕನ್ ಅಂಗಡಿ ಬಳಿ ನಿಲ್ಲಿಸಿದ್ದ ಚಂದ್ರ ಅವರ ಸ್ಪ್ಲೆಂಡರ್ ಪ್ಲಸ್ ಬೈಕ್ ಕದ್ದು ಪರಾರಿಯಾಗಿದ್ದನು. ಬಳಿಕ ಅದೇ ದಿನ ಕಿರಂಗೂರು ಗ್ರಾಮದ ಅಭಿಷೇಕ್ ಅವರ ಬೈಕ್ ಹತ್ತಿರ ಕದ್ದ ಬೈಕ್ ನಿಲ್ಲಿಸಿ, ಅವರ ಬೈಕ್ ಕದ್ದುಕೊಂಡು ಹೋಗಿದ್ದಾನೆ. ನಂತರ ಹಿಂಡಗೂಡ್ಲು ಗ್ರಾಮದ ಮಂಜು ಅವರ ಬೈಕನ್ನು ಕದ್ದಿದ್ದಾನೆ.
ಈ ರೀತಿ ಸರಣಿ ಕಳ್ಳತನ ನಡೆಸುತ್ತಿದ್ದ ಆರೋಪಿ ವಿರುದ್ಧ 23ರಂದು ದೂರು ದಾಖಲಾದ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿ, ಅಂತಿಮವಾಗಿ ಮಾ.26ರಂದು ಆರೋಪಿಯನ್ನು ಬಂಧಿಸಿದ್ದಾರೆ.
ಹಿಂದಿನ ಪ್ರಕರಣಗಳು: ಆರೋಪಿ ರಂಜನ್ ವಿರುದ್ಧ ಈಗಾಗಲೇ ಬೆಟ್ಟದಪುರ ಹಾಗೂ ಹುಣಸೂರು ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಜಾಮೀನಿನಲ್ಲಿ ಹೊರಬಂದು ಮತ್ತೆ ಕಳ್ಳತನ ಮುಂದುವರಿಸಿದ್ದಾನೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಪಿಎಸ್‌ಐ ರಾಮು, ಎಎಸ್‌ಐ ಅಂತೋಣಿಕ್ರೂಸ್, ಸಿಬ್ಬಂದಿ ಮಂಜುನಾಥ್, ವಸಂತ ಕುಮಾರ್, ವಿಜಯ ಹಾಗೂ ರಘು ಭಾಗವಹಿಸಿದ್ದರು.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಪ್ರಕಟಣೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net