ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಟಿಎಂಎನ್ ವಿದ್ಯಾಸಂಸ್ಥೆ ದಾರಿದೀಪ

ಬೆಟ್ಟದಪುರದ ಡಿ.ತಮ್ಮಯ್ಯ ಸ್ಮಾರಕ ನವೋದಯ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದನೆ ಸಲ್ಲಿಸಲಾಯಿತು.
ಬೆಟ್ಟದಪುರದ ಡಿ.ತಮ್ಮಯ್ಯ ಸ್ಮಾರಕ ನವೋದಯ ವಿದ್ಯಾಸಂಸ್ಥೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದನೆ ಸಲ್ಲಿಸಲಾಯಿತು.
Published on
ಬೆಟ್ಟದಪುರ: ಹಣಕ್ಕಾಗಿ, ಹೆಸರಿಗಾಗಿ ನಮ್ಮ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸದೆ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ದಾರಿದೀಪವಾಗಿದೆ ಎಂದು ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯ ಖಜಾಂಚಿ ರವಿ ಪಿ.ಚಪ್ಪರದಹಳ್ಳಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಡಿ.ತಮ್ಮಯ್ಯ ಸ್ಮಾರಕ ನವೋದಯ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಶ್ರಮ, ಗುರಿ, ನಿಖರವಾದ ಉದ್ದೇಶ ಇಟ್ಟುಕೊಂಡು ಅಭ್ಯಾಸ ಮಾಡಿದರೆ ಯಶಸ್ಸು ಖಂಡಿತ ಎಂಬುದನ್ನು ನಮ್ಮ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕಾಲೇಜು ವಿಭಾಗ ಸೇರಿದಂತೆ ಸಂಸ್ಥೆಯ ಇಡೀ ತಂಡ ಕೆಲಸ ನಿರ್ವಹಿಸಿದ ಪ್ರತಿಫಲವಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅನುಕೂಲಕ್ಕಾಗಿ ಸಂಸ್ಥೆಯಲ್ಲಿ ರಾತ್ರಿ ತರಗತಿಗಳು ಸೇರಿದಂತೆ ಕಲಿಯಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಲಾಗಿತ್ತು. ಸಿಇಟಿ, ನೀಟ್ ಪರೀಕ್ಷೆ ಬಗ್ಗೆ ಮಕ್ಕಳು ತಯಾರಿ ಮಾಡಿಕೊಳ್ಳಬೇಕು, ನೀಡುವ ಮಾರ್ಗದರ್ಶನವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಸಂಸ್ಥೆಯ ನಿರ್ದೇಶಕ ಸಿ.ಟಿ ಗುರುದತ್ ಮಾತನಾಡಿ, ನೀಟ್ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿ ಎಂಬಿಬಿಎಸ್ ಸೀಟ್ ಪಡೆದುಕೊಳ್ಳುವ ನಮ್ಮ ಸಂಸ್ಥೆಯ ವಿದ್ಯಾರ್ಥಿಗೆ ಒಂದು ಲಕ್ಷ ರೂ.ಬಹುಮಾನವಾಗಿ ನೀಡಲಾಗುವುದು. 2015ರಲ್ಲಿ ಆರಂಭಗೊಂಡ ಕಾಲೇಜು ಶಿಕ್ಷಣದಲ್ಲಿ ಈ ಐದು ವರ್ಷಗಳಲ್ಲಿ ಶೇ.100 ಪಡೆದಿದೆ. ಗ್ರಾಮಾಂತರ ಭಾಗದ ಮಕ್ಕಳ ಅನುಕೂಲಕ್ಕಾಗಿ ಎಲ್ಲ ಸೌಕರ್ಯ ಜತೆಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಸಂಸ್ಥೆ ಹೆಸರು ಮಾಡಿದೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಎಂ.ಎಚ್.ಲಕ್ಷ್ಮೀ, ಎಸ್.ವಿ.ಲಿಕೃತಿ, ಶ್ರೀನಿವಾಸ, ಪಿ.ಜೆ ಮೋಕ್ಷಿತಾ, ಸೃಷ್ಟಿ, ಎಸ್.ಆರ್.ಪರೀಕ್ಷಿತ್, ಕೆ.ಸಿ.ಚೈತ್ರಾ, ಕೆ.ಎಂ.ಕಾವ್ಯ , ಎಂ.ರಚನಾ ಗೌಡ, ಎಚ್.ಆರ್.ಸೃಜನ್ ನಾಯಕ್, ಕೆ.ಎಂ.ಲೋಹಿಶ್ ಅವರನ್ನು ಅಭಿನಂದಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ, ಕಾರ್ಯದರ್ಶಿ ಶೈಲಾ, ಖಜಾಂಚಿ ಪಿ.ರವಿ, ನಿರ್ದೇಶಕರಾದ ಸಿ.ಟಿ ಗುರುದತ್, ವಿಜಯಕುಮಾರ್, ಪ್ರಾಂಶುಪಾಲ ಸತೀಶ್ ಕುಮಾರ್, ಸಿಇಟಿ ಮಾರ್ಗದರ್ಶಕ ಅಮೃತ್ ರಾಮ್, ಉಪನ್ಯಾಸಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net