ಪಿರಿಯಾಪಟ್ಟಣ ಐಟಿಐ ಕಾಲೇಜಿಗೆ ಕಪ್

ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಅನಿಕೇತನ ಫ್ಯಾಮಿಲಿ ಕಪ್ ಸೀಸನ್ 2ರಲ್ಲಿ ಕಾಲೇಜು ವಿಭಾಗದಲ್ಲಿ ಪಿರಿಯಾಪಟ್ಟಣ ಐಟಿಐ ಕಾಲೇಜು ಜಯಗಳಿಸುವ ಮೂಲಕ ಕಪ್ ಮುಡಿಗೇರಿಸಿಕೊಂಡತು.
ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಅನಿಕೇತನ ಫ್ಯಾಮಿಲಿ ಕಪ್ ಸೀಸನ್ 2ರಲ್ಲಿ ಕಾಲೇಜು ವಿಭಾಗದಲ್ಲಿ ಪಿರಿಯಾಪಟ್ಟಣ ಐಟಿಐ ಕಾಲೇಜು ಜಯಗಳಿಸುವ ಮೂಲಕ ಕಪ್ ಮುಡಿಗೇರಿಸಿಕೊಂಡತು.
Published on
ಬೆಟ್ಟದಪುರ: ಗ್ರಾಮೀಣ ಭಾಗದ ಶಾಲಾ, ಕಾಲೇಜು ಹಂತದಲ್ಲಿ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಎಲ್ಲರನ್ನೂ ಒಂದು ಕಡೆ ಸೇರಿಸುವುದು ಸಾಮಾನ್ಯ ಸಂಗತಿಯಲ್ಲ ಎಂದು ರಂಗಭೂಮಿ ಕಲಾವಿದ ಭರಮಣ್ಣ ಬೆಟ್ಟಗೇರಿ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅನಿಕೇತನ ಫ್ಯಾಮಿಲಿ ಕಪ್ ಸೀಸನ್-2ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜು ಹಂತದಲ್ಲಿ ಕ್ರೀಡೆ ಆಯೋಜಿಸುವುದರಿಂದ ಮಕ್ಕಳಲ್ಲಿ ಅಡಗಿರುವ ತಮ್ಮದೇ ಆದ ವಿಶೇಷ ಪ್ರತಿಭೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇದರಿಂದ ವಿದ್ಯಾರ್ಥಿಗಳು ಮುಂಬರುವ ದಿನಗಳಲ್ಲಿ ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸುವಂತಹ ಕ್ರೀಡಾಪಟುಗಳಾಗಿ ಬೆಳೆಯಲಿದ್ದಾರೆ. ಇಂತಹ ಸೂಕ್ತ ವೇದಿಕೆ ಕಲ್ಪಿಸಿದ ಅನಿಕೇತನ ಸಂಸ್ಥೆಗೆ ಧನ್ಯವಾದಗಳು ಎಂದರು.
ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಪಂದ್ಯಾವಳಿಗೆ ಹನ್ನೊಂದಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿದ್ದವು. ಕಾಲೇಜು ವಿಭಾಗದಲ್ಲಿ ಪಿರಿಯಾಪಟ್ಟಣ ಐಟಿಐ ಕಾಲೇಜು ಹಾಗೂ ಶಾಲಾ ವಿಭಾಗದಲ್ಲಿ ಬೆಟ್ಟದಪುರದ ಸರ್ಕಾರಿ ಪ್ರೌಢಶಾಲಾ ತಂಡಗಳು ಜಯಗಳಿಸಿ ಕಪ್ ಮುಡಿಗೇರಿಸಿಕೊಂಡವು. ಬೆಟ್ಟದಪುರದ ಡಿಟಿಎಂಎನ್ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಂಡಗಳು ರನ್ನರ್ ಅಪ್ ಸ್ಥಾನ ಪಡೆದುಕೊಂಡವು. ವಿಜೇತ ತಂಡಗಳು ಮತ್ತು ಆಯೋಜನೆಯ ಸಂಸ್ಥೆಯ ಪದಾಧಿಕಾರಿಗಳು ಸಮಾರೋಪ ಸಮಾರಂಭದಲ್ಲಿ ಕೊನೆಯ ಹಂತದಲ್ಲಿ ಕೊಡಗು ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.
ಯೋಗಪಟು ಗಣೇಶ್, ಚಿಕ್ಕನೇರಳೆ ಡೇರಿ ಅಧ್ಯಕ್ಷ ವೆಂಕಟೇಶ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಶಿವಣ್ಣ, ಹಲಗನಹಳ್ಳಿ ಸೊಸೈಟಿ ಉಪಾಧ್ಯಕ್ಷ ಶಿವಣ್ಣ, ಕಾಲೇಜಿನ ಅಧ್ಯಕ್ಷ ಅಪ್ಪಣ್ಣ, ಕಾರ್ಯದರ್ಶಿ ಡಾ.ಜೆ ಸೋಮಣ್ಣ, ನಿರ್ದೇಶಕಿ ಶಕುಂತಲಾ, ಕ್ರೀಡಾ ಸಂಚಾಲಕ ಟಿ.ಆರ್.ಪ್ರಶಾಂತ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net