ಬಳಕೆಯಾದ ಬ್ಯಾಟರಿಗಳ ವೈಜ್ಞಾನಿಕ ನಿರ್ವಹಣೆ ಸಂಬಂಧ ನಗರ ಪಾಲಿಕೆ ಮತ್ತು ಎವರೆಡಿ ಬ್ಯಾಟರೀಸ್ ಸಂಸ್ಥೆಯೊಂದಿಗೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಲಾಯಿತು. ಎಂ.ಕೆ.ಸವಿತಾ, ಕೆ.ಎಸ್.ಮೃತ್ಯುಂಜಯ, ಪ್ರಸಾದ್ ತಂತ್ರಿ, ಎಸ್.ನಾಗೇಶ್ ಇದ್ದರು.
Published on:
Copied
Follow Us
ನಗರದಲ್ಲಿ ಉತ್ಪತ್ತಿಯಾಗುವ ಬಳಕೆಯಾದ ಬ್ಯಾಟರಿಗಳ ವೈಜ್ಞಾನಿಕ ನಿರ್ವಹಣೆ ಹಾಗೂ ಬ್ಯಾಟರಿ ತ್ಯಾಜ್ಯ ನಿರ್ವಹಣಾ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ನಗರ ಪಾಲಿಕೆಯು ಎವರೆಡಿ ಬ್ಯಾಟರೀಸ್ ಸಂಸ್ಥೆಯೊಂದಿಗೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ.
ಒಡಂಬಡಿಕೆಯ ಮೂಲಕ ಬಳಕೆಯಾದ ಬ್ಯಾಟರಿಗಳನ್ನು ಸಾಮಾನ್ಯ ಘನತ್ಯಾಜ್ಯದೊಂದಿಗೆ ಮಿಶ್ರಣ ಮಾಡದೆ ಪ್ರತ್ಯೇಕವಾಗಿ ಸಂಗ್ರಹಿಸಿ, ಅಧಿಕೃತ ಹಾಗೂ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕ ಸಾಗಣೆ, ಮರು ಸಂಸ್ಕರಣೆ ಮತ್ತು ಸುರಕ್ಷಿತ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಬಲಪಡಿಸಲಾಗುತ್ತದೆ.
ಈ ರೀತಿಯ ಒಡಂಬಡಿಕೆಗೆ ಸಹಿ ಹಾಕಿರುವ ಕರ್ನಾಟಕದ ಮೊದಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಗರ ಪಾಲಿಕೆಯೂ ಒಂದಾಗಿದೆ. ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು, ಪರಿಸರ ಮಾಲಿನ್ಯ ತಡೆಗಟ್ಟುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪಾಲಿಕೆಯ ಬದ್ಧತೆಯನ್ನು ಈ ಉಪಕ್ರಮ ಮತ್ತೊಮ್ಮೆ ಸಾಬೀತುಪಡಿಸಿದೆ.
ಒಡಂಬಡಿಕೆ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ, ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಎಸ್.ಮೃತ್ಯುಂಜಯ, ಎವರೆಡಿ ಬ್ಯಾಟರೀಸ್ ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ (ಕಾರ್ಯಾಚರಣೆ) ಪ್ರಸಾದ್ ತಂತ್ರಿ ಹಾಗೂ ವ್ಯವಸ್ಥಾಪಕ (ಮಾನವ ಸಂಪನ್ಮೂಲ, ಕೈಗಾರಿಕಾ ಸಂಬಂಧ ಮತ್ತು ಆಡಳಿತ) ಎಸ್.ನಾಗೇಶ್ ಇದ್ದರು.