ಫೆ. 8ರಂದು ಬಾಬಾ ಸಾಹೇಬರ ಪುತ್ಥಳಿ ಅನಾವರಣ

 ಇಟ್ನ ರಾಜಣ್ಣ
ಇಟ್ನ ರಾಜಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಫೆ. 8ರಂದು ಬಾಬಾ ಸಾಹೇಬರ ಪುತ್ಥಳಿ ಅನಾವರಣ
ಎಚ್.ಡಿ. ಕೋಟೆ: ಬಾಬಾ ಸಾಹೇಬರ ಪುತ್ಥಳಿ ಅನಾವರಣ ಮತ್ತು ಉದ್ಘಾಟನಾ ಸಮಾರಂಭವನ್ನು ಫೆ. 8ರಂದು ಭಾನುವಾರ ತಾಲೂಕಿನ ಇಟ್ನ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸರಗೂರು ತಾಲೂಕು ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ ತಿಳಿಸಿದರು.
ಫೆ.8 ರಂದು ಬೆಳಗ್ಗೆ 11 ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ  ಮೈಸೂರು ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಅಂತರಸಂತೆ ಬುದ್ಧ ವಿಹಾರದ ಗೌತಮಿ ಬಂತೇಜಿ  ಪ್ರತಿಮೆಯ ವಿಧಿವಿಧಾನವನ್ನು ನಡೆಸಿಕೊಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಲಿದ್ದಾರೆ. ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆ ವಹಿಸಲಿದ್ದು, ಸಂಸದ ಸುನೀಲ್ ಬೋಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಟ್ನ ಗ್ರಾಮದ ದೊಡ್ಡ ಯಜಮಾನ ಸುರೇಶ್, ಚಿಕ್ಕ ಯಜಮಾನ ಅನಿಲ್ ಕುಮಾರ್, ಮಾಜಿ ಯಜಮಾನ ಚಿಕ್ಕಣ್ಣ, ಇಟ್ನ ಗ್ರಾಮದ ಮುಖಂಡರಾದ ಕುಮಾರಸ್ವಾಮಿ, ಶ್ರೇಯಸ್ ಕುಮಾರ್, ಉದಯ್ ಕುಮಾರ್, ದೊಡ್ಡಯ್ಯ, ನಂಜುಂಡಯ್ಯ, ಆಟೋ ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net