‘ಆರೋ ಇಂಟೀರಿಯರ್ಸ್‌’-auro interiors ವತಿಯಿಂದ ಭರ್ಜರಿ ಆಫರ್

ಹೆಸರಾಂತ ಕನ್‌ಸ್ಟ್ರಕ್ಷನ್ ಕಂಪನಿ ‘ನಕ್ಷ ಬಿಲ್ಡರ್ಸ್
ಹೆಸರಾಂತ ಕನ್‌ಸ್ಟ್ರಕ್ಷನ್ ಕಂಪನಿ ‘ನಕ್ಷ ಬಿಲ್ಡರ್ಸ್
Published on

ಪ್ರಮುಖ ಮುಖ್ಯಾಂಶಗಳು

  • ಜನರ ಮನಗೆದ್ದ ‘ನಕ್ಷ ಬಿಲ್ಡರ್ಸ್’
  • ಅಭಿರುಚಿಗೆ ತಕ್ಕಂತೆ ಮನೆ ನಿರ್ಮಾಣ
  • ವಿಶ್ವಾಸಾರ್ಹ ಸಂಸ್ಥೆ ಎಂಬ ಹೆಗ್ಗಳಿಕೆ
ಮೈಸೂರು: ಹೆಸರಾಂತ ಕನ್‌ಸ್ಟ್ರಕ್ಷನ್ ಕಂಪನಿ ‘ನಕ್ಷ ಬಿಲ್ಡರ್ಸ್’ ಜನರ ಅಭಿರುಚಿಗೆ ತಕ್ಕಹಾಗೆ ಅತ್ಯಾಧುನಿಕ ಹಾಗೂ ಅತ್ಯುತ್ತಮ ಮಾದರಿಯ ಮನೆಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿ ಇದೆ.
ಮನೆ ನಿರ್ಮಿಸುವ ಜತೆಗೆ ಇಂಟೀರಿಯರ್ಸ್‌ ಸೇವೆ ನೀಡುವಲ್ಲಿಯೂ ಹೆಸರಾಗಿರುವ ‘ನಕ್ಷ ಬಿಲ್ಡರ್ಸ್’ ಮೈಸೂರು ಜನರ ನಂಬಿಕೆ ಹಾಗೂ ವಿಶ್ವಾಸಾರ್ಹ ಸಂಸ್ಥೆ. ವಿಜಯನಗರದ ವಾಟರ್ ಟ್ಯಾಂಕ್ ಬಳಿ ಕಚೇರಿ ಹೊಂದಿರುವ ನಕ್ಷ ಬಿಲ್ಡರ್ಸ್ ಈ ವರ್ಷ ತನ್ನ ಅಂಗ ಸಂಸ್ಥೆಯಾಗಿ ‘ಆರೋ ಇಂಟೀರಿಯರ್ಸ್‌’ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಈ ಸಂಸ್ಥೆ ಮೂಲಕ ಮನೆಯ ಇಂಟೀರಿಯರ್ಸ್‌ ಸೇವೆಗಳನ್ನು ನೀಡುತ್ತಿದೆ.
ಶೇ.50 ರಷ್ಟು ಲಾಂಚ್ ಆಫರ್: ‘ಆರೋ ಇಂಟೀರಿಯರ್ಸ್‌’ ಸಂಸ್ಥೆಯಿಂದ ವಿಶೇಷ ಮೂರು ರೀತಿಯಲ್ಲಿ ಲಾಂಚ್ ಆಫರ್ ಘೋಷಣೆ ಮಾಡಿದೆ. ಎಸೆನ್ಷಿಯಲ್ಸ್, ಕಂಫರ್ಟ್ ಹಾಗೂ ಪ್ರೀಮಿಯಂ ಎಂಬ ಮೂರು ರೀತಿ ಆಫರ್‌ಗಳ ಮೇಲೆ ಶೇ.50 ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ.
ಎಸೆನ್ಷಿಯಲ್ಸ್ ಆಫರ್‌ನಲ್ಲಿ 5 ಲಕ್ಷ ರೂ. ಬೆಲೆ ಬಾಳುವ ವಾರ್ಡ್‌ರೋಬ್ಸ್, ಕಿಚನ್ ಕ್ಯಾಬಿನೆಟ್ಸ್, ಕಿಚನ್ ಕೌಂಟರ್ ಟಾಪ್, ಟಿವಿ ಯೂನಿಟ್ ಹಾಗೂ ಶೂ ರ‌್ಯಾಕನ್ನು 2.50 ಲಕ್ಷ ರೂ.ಗಳಿಗೆ ನೀಡಲಾಗುತ್ತಿದೆ. ಕಂಫರ್ಟ್ ಆಫರ್‌ನಲ್ಲಿ 7 ಲಕ್ಷ ರೂ. ಬೆಲೆ ಬಾಳುವ ವಾರ್ಡ್‌ರೋಬ್ಸ್, ಕಿಚನ್ ಕ್ಯಾಬಿನೆಟ್ಸ್, ಕಿಚನ್ ಕೌಂಟರ್ ಟಾಪ್, ಟಿವಿ ಯೂನಿಟ್, ಶೂ ರ‌್ಯಾಕ್ ಹಾಗೂ ಕಿಂಗ್ ಸೈಜ್ ಕಾಟ್ಸ್‌ಗಳನ್ನು 3.50 ಲಕ್ಷ ರೂ.ಗಳಿಗೆ ನೀಡಲಾಗುತ್ತಿದೆ. ಪ್ರೀಮಿಯಂ ಆಫರ್‌ನಲ್ಲಿ 9 ಲಕ್ಷ ರೂ. ಬೆಲೆ ಬಾಳುವ ವಾರ್ಡ್‌ರೋಬ್ಸ್, ಕಿಚನ್ ಕ್ಯಾಬಿನೆಟ್ಸ್, ಕಿಚನ್ ಕೌಂಟರ್ ಟಾಪ್, ಟಿವಿ ಯೂನಿಟ್, ಶೂ ರ‌್ಯಾಕ್, ಕಿಂಗ್ ಸೈಜ್ ಕಾಟ್ಸ್, ಕಾಟ್ ಹೆಡ್‌ಬೋರ್ಡ್ ಮ್ಯಾಟ್ರೆಸ್ ಹಾಗೂ ಸ್ಟಡೀ ಟೇಬಲ್‌ಗಳನ್ನು 4.50 ಲಕ್ಷ ರೂ.ಗಳಿಗೆ ನೀಡಲಾಗುತ್ತಿದೆ.

ಮೈಬಿಲ್ಡ್‌ನ ನಕ್ಷ ಮಳಿಗೆಗೆ ಭೇಟಿ ನೀಡಿ

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಬಿಎಐ) ಮೈಸೂರು ಶಾಖೆ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ‘ಮೈ ಬಿಲ್ಡ್-25’ ಪ್ರದರ್ಶನದಲ್ಲಿ ಸದ್ಯ ‘ನಕ್ಷ ಬಿಲ್ಡರ್ಸ್’ ಮಳಿಗೆಯನ್ನು ತೆರೆದಿದೆ. ಮೈಬಿಲ್ಡ್ ಪ್ರದರ್ಶನವು ಡಿ.15 ರವರೆಗೆ ನಡೆಯಲಿದ್ದು, ನಿತ್ಯ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ‘ನಕ್ಷ ಬಿಲ್ಡರ್ಸ್’ ಮಳಿಗೆ ಭೇಟಿ ನೀಡಬಹುದಾಗಿದೆ. ಈ ವೇಳೆ ಸದರಿ ಆಫರ್‌ಗಳನ್ನು ಸೈನ್‌ಅಪ್ ಮಾಡಿದರೆ ಉಚಿತವಾಗಿ ಸೋಫಾಸೆಟ್ ಕೂಡ ನೀಡಲಾಗುತ್ತಿದೆ.

10 ವರ್ಷಗಳ ಸುದೀರ್ಘ ಸೇವೆ

‘ನಕ್ಷ ಬಿಲ್ಡರ್ಸ್’ ಸೇವೆ ಮೈಸೂರಿಗೆ ಮಾತ್ರ ಸೀಮಿತವಾಗಿಲ್ಲ ಹಾಸನ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲೂ ವಿಸ್ತರಿಸಿದೆ. ನಕ್ಷ ಸಂಸ್ಥೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುಮಾರು 10 ವರ್ಷಗಳ ಸುದೀರ್ಘ ಪರಂಪರೆ ಹೊಂದಿರುವ ಉತ್ತಮ ಗುಣಮಟ್ಟದ ಸೇವೆ ನೀಡುತ್ತಾ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
10 ವರ್ಷದ ಅವಧಿಯಲ್ಲಿ 300ಕ್ಕೂ ಹೆಚ್ಚ ಮನೆಗಳನ್ನು ನಿರ್ಮಾಣ ಮಾಡಿದೆ. ಸದ್ಯ ಈ ವರ್ಷ ಏಕಕಾಲದಲ್ಲಿ 137 ಮನೆಗಳ ನಿರ್ಮಾಣ ಕಾರ್ಯ ಕಂಪನಿಯಿಂದ ನಡೆಯುತ್ತಿದ್ದು, ಇದು ಕಂಪನಿಯ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ. ಜತೆಗೆ ಆರೋ ಇಂಟೀರಿಯಲ್ಸ್ ಸಂಸ್ಥೆ ವತಿಯಿಂದಲೂ 75 ಮನೆಗಳಿಗೆ ಇಂಟಿರಿಯಲ್ಸ್ ಸೇವೆ ಒದಗಿಸಲಾಗಿದೆ.
ನಕ್ಷ ಸಂಸ್ಥೆ ಉತ್ತಮವಾದ ಆರ್ಕಿಟೆಕ್ಟ್, ಡಿಸೈನರ್ಸ್‌, ಸಿವಿಲ್ ಇಂಜಿನಿಯರ್ಸ್‌, ಉದ್ಯೋಗಿಳನ್ನು ಹೊಂದಿದೆ. ಮನೆ ಕಟ್ಟಲು ಆರಂಭಿಸಿದ ದಿನದಿಂದ ಅಂತ್ಯದವರೆಗೂ ಎಲ್ಲ ರೀತಿಯ ಸೇವೆ ನೀಡುತ್ತಿದೆ. ಮನೆ ಕಟ್ಟಲು ಗುದ್ದಲಿ ಪೂಜೆಗೆ ಪುರೋಹಿತರನ್ನು ಕರೆಸುವುದರಿಂದ ಹಿಡಿದು ಗೃಹಪ್ರವೇಶಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.
"

‘ನಕ್ಷ ಬಿಲ್ಡರ್ಸ್’ ಈ ವರ್ಷ ಇಂಟೀರಿಯರ್ಸ್‌ಗಾಗಿ ‘ಆರೋ ಇಂಟೀರಿಯರ್ಸ್‌’ ಸಂಸ್ಥೆಯನ್ನು ಪ್ರಾರಂಭಿಸಿದ್ದು, ವಿಶೇಷ ಮೂರು ರೀತಿಯಲ್ಲಿ ಲಾಂಚ್ ಆಫರ್ ಘೋಷಣೆ ಮಾಡಿದ್ದೇವೆ. ಎಸೆನ್ಷಿಯಲ್ಸ್, ಕಂಫರ್ಟ್ ಹಾಗೂ ಪ್ರೀಮಿಯಂ ಎಂಬ ಮೂರು ರೀತಿ ಆಫರ್‌ಗಳ ಮೇಲೆ ಶೇ.50ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net