ವ್ಯಾಸರಾಜ ಮಠಕ್ಕೆ ಉತ್ತರಾಧಿಕಾರಿ ನೇಮಿಸಿ

ಒತ್ತಾಯ
ಒತ್ತಾಯ
Published on

ಪ್ರಮುಖ ಮುಖ್ಯಾಂಶಗಳು

  • ಸೇವಾ ಸಮಿತಿಯ ಸದಸ್ಯ ಕೆ.ವೇಣುಗೋಪಾಲ್ ಒತ್ತಾಯ
ಮೈಸೂರು ಶ್ರೀ ಸೋಸಲೆ ವ್ಯಾಸರಾಜ ಮಠಕ್ಕೆ ಉತ್ತರಾಧಿಕಾರಿಯಾಗಿ ವಿದ್ಯಾವಿಜಯ ತೀರ್ಥ ಸ್ವಾಮೀಜಿ ಅವರನ್ನು ನೇಮಕ ಮಾಡಬೇಕು ಎಂದು ಶ್ರೀ ವ್ಯಾಸರಾಜ ಸೇವಾ ಸಮಿತಿಯ ಸದಸ್ಯ ಹಾಗೂ ಮಠದ ಭಕ್ತ ಕೆ.ವೇಣುಗೋಪಾಲ್ ಒತ್ತಾಯಿಸಿದರು.
800 ವರ್ಷಗಳ ಇತಿಹಾಸ ಇರುವ ಮಠದಲ್ಲಿ ಹಲವು ವರ್ಷಗಳಿಂದ ಉತ್ತರಾಧಿಕಾರಿ ಇಲ್ಲದೇ ಮಠದ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಭಕ್ತರಲ್ಲಿ ತೀವ್ರ ನಿರಾಸೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಾಧಿಕಾರಿಯಾಗಿ ಘೋಷಣೆಯಾಗಿರುವ ವಿದ್ಯಾ ವಿಜಯ ತೀರ್ಥ ಸ್ವಾಮೀಜಿ ಅವರನ್ನು ನೇಮಕ ಮಾಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಠದ ಪರಂಪರೆಯಲ್ಲಿ ಹಿಂದೆ ಯಾವುದೇ ಪೀಠಾಧಿಪತಿಗಳು ನ್ಯಾಯಾಲಯಕ್ಕಾಗಲಿ ಅಥವಾ ಅದರ ಆದೇಶಗಳಿಗಾಗಲಿ ಅಗೌರವ ತೋರಿಸಿರುವ ಉದಾಹರಣೆಗಳಿಲ್ಲ. ಮಠದ ಉತ್ತರಾಧಿಕಾರಿಯಾಗಿ ವಿದ್ಯಾವಿಜಯ ತೀರ್ಥರನ್ನು ನೇಮಕ ಮಾಡುವುದಾಗಿ ಮಠದ ಶ್ರೀಗಳಾದ ವಿದ್ಯಾಶ್ರೀಶ ತೀರ್ಥರು ೋಷಿಸಿ 9 ವರ್ಷ ಕಳೆದರೂ ಅದು ಜಾರಿಗೆ ಬಂದಿಲ್ಲ. ಇದರಿಂದ ಭಕ್ತರಿಗೆ ನೋವಾಗಿದೆ ಎಂದರು.
ಮಠದ ಉತ್ತರಾಧಿಯಾಗಿ ವಿದ್ಯಾವಿಜಯ ತೀರ್ಥರನ್ನು ನೇಮಕ ಮಾಡದೇ ಇದ್ದರೆ ಮಠದ ಭಕ್ತರ ಪರವಾಗಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮುರಳೀಧರ್, ನರಸಿಂಹನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net