ಶಿಕ್ಷಕರಿಗೆ ಕಡ್ಡಾಯ ಟಿಇಟಿಯಿಂದ ವಿನಾಯಿತಿಗೆ ಮನವಿ

ಶಿಕ್ಷಕರಿಗೆ ಕಡ್ಡಾಯ ಶಿಕ್ಷಕ ಅರ್ಹತಾ ಪರೀಕ್ಷೆ (ಟಿಇಟಿ) ಯಿಂದ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಡಿ. ಕೆಂಪಯ್ಯ, ಎಸ್.ಪಿ. ವಿಜಯ್‌ಕುಮಾರ್, ಅರುಣ್‌ಕುಮಾರ್ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಥಮಿಕ ಶಾಲೆಗಳಿಗೆ 2010ರೊಳಗೆ ನೇಮಕಗೊಂಡಿರುವ ಶಿಕ್ಷಕರಿಗೆ ಕಡ್ಡಾಯ ಶಿಕ್ಷಕ ಅರ್ಹತಾ ಪರೀಕ್ಷೆ (ಟಿಇಟಿ) ಯಿಂದ ವಿನಾಯಿತಿ ನೀಡಬೇಕು
  • ದೇಶದಾದ್ಯಂತ 17 ಲಕ್ಷ ಶಿಕ್ಷಕರಿದ್ದು ಬಹುತೇಕರು ಟಿಇಟಿ ಪರೀಕ್ಷೆ ಮಾಡಿಲ್ಲ
ಮೈಸೂರು: ಪ್ರಾಥಮಿಕ ಶಾಲೆಗಳಿಗೆ 2010ರೊಳಗೆ ನೇಮಕಗೊಂಡಿರುವ ಶಿಕ್ಷಕರಿಗೆ ಕಡ್ಡಾಯ ಶಿಕ್ಷಕ ಅರ್ಹತಾ ಪರೀಕ್ಷೆ (ಟಿಇಟಿ) ಯಿಂದ ವಿನಾಯಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ಶಿಕ್ಷಕರ ವೃತ್ತಿಯಲ್ಲಿ ಅನೇಕ ವರ್ಷಗಳಿಂದ ಸುದೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ದೇಶದಾದ್ಯಂತ 17 ಲಕ್ಷ ಶಿಕ್ಷಕರು ಇದ್ದಾರೆ. ಬಹುತೇಕರು ಟಿಇಟಿ ಪರೀಕ್ಷೆ ಮಾಡಿಲ್ಲ. ಆದ್ದರಿಂದ ಸರ್ಕಾರ ನ್ಯಾಯಾಲಯದ ಆದೇಶಕ್ಕೂ ಮುನ್ನಾ 2010ರೊಳಗೆ ನೇಮಕಗೊಂಡವರಿಗೆ ಟಿಇಟಿ ಪರೀಕ್ಷೆ ಕಡ್ಡಾಯದಿಂದ ವಿನಾಯಿತಿ ನೀಡಿ ಎಂದು ಕೋರಿದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಸಂಘದ ಅಧ್ಯಕ್ಷ ಡಿ. ಕೆಂಪಯ್ಯ, ಪ್ರಧಾನ ಕಾರ್ಯದರ್ಶಿಎಸ್.ಪಿ. ವಿಜಯ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net