ದೇಶದ ಜನತೆಗಾಗಿ ಜೀವನ ಮುಡಿಪಾಗಿದ್ದ ಅಂಬೇಡ್ಕರ್

ನಗರದಲ್ಲಿ ಆಯೋಜಿಸಿದ್ದ ಭೀಮನಮನ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಬಿ.ರಂಗೇಗೌಡ, ಚಂದ್ರಗುಪ್ತ, ಎಂ.ಎನ್. ಜನಾರ್ಧನ್, ಶಿವಶಂಕರ್, ಕಮಲಾಕ್ಷಿ, ಗಾಯತ್ರಿ ಇದ್ದರು.
ನಗರದಲ್ಲಿ ಆಯೋಜಿಸಿದ್ದ ಭೀಮನಮನ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಬಿ.ರಂಗೇಗೌಡ, ಚಂದ್ರಗುಪ್ತ, ಎಂ.ಎನ್. ಜನಾರ್ಧನ್, ಶಿವಶಂಕರ್, ಕಮಲಾಕ್ಷಿ, ಗಾಯತ್ರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ಬಣ್ಣನೆ
ಮೈಸೂರು: ಭಾರತಕ್ಕೆ ಸಂವಿಧಾನವನ್ನು ಬರೆದುಕೊಟ್ಟ ಅಂಬೇಡ್ಕರ್ ಒಬ್ಬ ವಿಶ್ವಜ್ಞಾನಿಯಾಗಿದ್ದು, ಅವರನ್ನು ಪ್ರತಿನಿತ್ಯ ದೇವರನ್ನು ನೆನೆದುಕೊಳ್ಳುವ ಹಾಗೆ ಸ್ಮರಣೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ರಂಗೇಗೌಡ ತಿಳಿಸಿದರು.
ರಾಜರಾಜೇಶ್ವರಿನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಭೀಮನಮನ ಮತ್ತು ನಿಲಯದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರದು ಭಾರತದಲ್ಲಿಯೇ ಅತ್ಯಂತ ಅಪರೂಪದ ವ್ಯಕ್ತಿತ್ವ. ಅವರ ಜೀವನ ಪ್ರತಿದಿನ ಹೋರಾಟದ ದಿನಗಳಾಗಿದ್ದವು, ಹೆಜ್ಜೆಹೆಜ್ಜೆಗೂ ವಿರೋಧಿಗಳಿದ್ದರು. ಇಡೀ ಜೀವನವನ್ನು ಭಾರತದ ಜನತೆಗಾಗಿ ಮುಡಿಪಾಗಿಟ್ಟಿದ್ದರು. ಸಮಾಜದಲ್ಲಿ ಕಟ್ಟಕಡೆಯ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಸಿಗಬೇಕೆಂದು ಹೋರಾಡಿದವರು. ಇಂತಹ ಮಹಾನ್ ನಾಯಕರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರು ವಿವಿ ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಚಂದ್ರಗುಪ್ತ ಮಾತನಾಡಿ, ಜ್ಯೋತಿ ಬಾಪುಲೆ ಭಾರತದಲ್ಲಿಯೇ ಪ್ರಥಮವಾಗಿ ಮಹಿಳೆಯರಿಗೆ ಶಿಕ್ಷಣ ನೀಡಲು ಶ್ರಮಿಸಿದರು. ಅಂಬೇಡ್ಕರ್ ಮಹಿಳೆಯರಿಗೆ ಸಮಾನ ಅವಕಾಶ ಕೊಡಬೇಕೆಂದು ಹೋರಾಡಿದರು. ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನದಿಂದ ಪ್ರತಿಯೊಬ್ಬರೂ ನೆಮ್ಮದಿಯಿಂದ ಇದ್ದೇವೆ ಎಂದರು.
ಸಹಾಯಕ ನಿರ್ದೇಶಕ ಎಂ.ಎನ್. ಜನಾರ್ಧನ್, ಶಿವಶಂಕರ್, ನಿಲಯಪಾಲಕಿಯರಾದ ಕಮಲಾಕ್ಷಿ, ಗಾಯತ್ರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net