ಚಾಮರಾಜೇಶ್ವರಿ ಅಕ್ಕನ ಬಳಗದಿಂದ ಅಕ್ಕಮಹಾದೇವಿ ಜಯಂತಿ ಆಚರಣೆ

ಚಾಮರಾಜೇಶ್ವರಿ ಅಕ್ಕನ ಬಳಗದ ಕುವೆಂಪುನಗರದ ಕಾನೂನು ಕಾಲೇಜು ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಈ ಸಂದರ್ಭ ವಾತ್ಸಲ್ಯ ಸೇವಾ ಫೌಂಡೇಷನ್ ಸಂಸ್ಥಾಪಕಿ ನಾಗರತ್ನ ಅವರನ್ನು ಸನ್ಮಾನಿಸಲಾಯಿತು.  ಶ್ರೀ ಶ್ರೀಕಂಠ ಸ್ವಾಮೀಜಿ ಸಾನ್ನಿಧ್ಯ, ಹೇಮಾ ಪಾಟೀಲ್, ಮಾದಲಾಂಬಿಕೆ ನಂಜುಂಡಸ್ವಾಮಿ ಇದ್ದರು.

Published on
ಮೈಸೂರು: ಚಾಮರಾಜೇಶ್ವರಿ ಅಕ್ಕನ ಬಳಗದ ವತಿಯಿಂದ ಕುವೆಂಪುನಗರದ ಕಾನೂನು ಕಾಲೇಜು ಸಭಾಂಗಣದಲ್ಲಿ ಗುರುವಾರ ಅಕ್ಕಮಹಾದೇವಿ ಜಯಂತಿ ಆಯೋಜಿಸಲಾಗಿತ್ತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಹೇಮಾ ಪಾಟೀಲ್ ಮಾತನಾಡಿ, ನಾವು ಜಾತಿ, ಹಣ, ಅಧಿಕಾರ ಎಂಬ ಅಹಂಕಾರದಿಂದ ನಾವು ಹೊರ ಬರಬೇಕು, ಆ ಮೂಲಕ ಭಾವಶುದ್ಧಿಯಾಗಬೇಕು. ಭಾವಶುದ್ಧಿಯಾಗಬೇಕಾದರೆ ಮನದಲ್ಲಿ ಯಾವುದೇ ಕೆಟ್ಟ ಆಲೋಚನೆಗಳು ಇರಬಾರದು. ನಾವು ಯಾರ ಬಗ್ಗೆಯೂ ಕೆಟ್ಟದಾಗಿ ಆಲೋಚನೆ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.
ಒಂದಲ್ಲ ಒಂದು ದಿನ ನಾವು ಈ ಪ್ರಪಂಚವನ್ನು ಬಿಟ್ಟು ಹೋಗಬೇಕಾಗುತ್ತದೆ. ಹೀಗಾಗಿ ಭೋಗ ವಸ್ತುಗಳ ಅತಿಯಾದ ವ್ಯಾಮೋಹ ಒಳ್ಳೆಯದಲ್ಲ. ಮಾಡುವ ಕಾಯಕವನ್ನು ನಾವು ನಿಷ್ಠೆಯಿಂದ ಮಾಡಬೇಕು. ನಾವು ಸ್ವಾರ್ಥದಿಂದ ಯಾವುದೇ ಕೆಲಸ ಮಾಡಬಾರದು, ನಿಷ್ಕಾಮದಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭ ವಾತ್ಸಲ್ಯ ಸೇವಾ ಫೌಂಡೇಷನ್ ಸಂಸ್ಥಾಪಕಿ ನಾಗರತ್ನ ಅವರನ್ನು ಸನ್ಮಾನಿಸಲಾಯಿತು. ಶ್ರೀ ಅರಮನೆ ಪಂಚಗವಿ ಮಠದ ಶ್ರೀ ಶ್ರೀಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಬಳಗದ ಅಧ್ಯಕ್ಷೆ ಮಾದಲಾಂಬಿಕೆ ನಂಜುಂಡಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net