ಅಂತರ ಬೆಳೆಯಾಗಿ 500 ಕಾಫಿ, 400 ಸಿಲ್ವರ್, 300 ಕಾಳು ಮೆಣಸು ಬಳ್ಳಿ ಬೆಳೆದಿದ್ದಾರೆ. ಇದರ ಜತೆಗೆ 10 ಸೇಬು, ಸೀಬೆ, ನಿಂಬೆ, ಬೆಣ್ಣೆ ಹಣ್ಣು, ಮಾವು, ಪರಂಗಿ, ಸೀತಾಫಲ ಮರವನ್ನೂ ಹೊಂದಿದ್ದಾರೆ. ಎಲೆ ಅಂಜೂರ, ನಕ್ಷತ್ರ ಹಣ್ಣು, ಬೆಟ್ಟದ ನಲ್ಲಿ, ಕಿರು ನೆಲ್ಲಿಕಾಯಿ, ಅಮಟೆ, ಚೆರ‌್ರಿ, ಗೋಡಂಬಿ ಬೆಳೆದಿದ್ದಾರೆ. ಔಷಧ ಗಿಡಮೂಲಿಕೆಯಾಗಿರುವ ಛಾಯಾ ಮಾನಸ, ಚಕ್ರಮುನಿ ಮತ್ತು ಗೃಹಬಳಕಗಾಗಿ 15 ಬದನೆ ಗಿಡಗಳು ಸಾಕಷ್ಟು ಫಲ ನೀಡಿವೆ.