ಮಾಕ್ ಮೀಟ್ ಈಜು ಸ್ಪರ್ಧೆಯಲ್ಲಿ ಆದ್ಯಾ ಸಾಧನೆ

 ತರಬೇತುದಾರ ಸ್ಕಂದ ಆರ್. ಅಶ್ವತ್, ಆಲ್ಬರ್ಟ್ ಸೆಬಾಸ್ಟಿಯನ್ ಜತೆ ಆದ್ಯಾ ಮಂಜುನಾಥ ಹಿರೇಮಠ ಇದ್ದಾರೆ.
ತರಬೇತುದಾರ ಸ್ಕಂದ ಆರ್. ಅಶ್ವತ್, ಆಲ್ಬರ್ಟ್ ಸೆಬಾಸ್ಟಿಯನ್ ಜತೆ ಆದ್ಯಾ ಮಂಜುನಾಥ ಹಿರೇಮಠ ಇದ್ದಾರೆ.
Published on
ಬೆಂಗಳೂರಿನಲ್ಲಿ ಜರುಗಿದ ಮಾಕ್ ಮೀಟ್-2026 ಸ್ಪರ್ಧೆಯಲ್ಲಿ ನಗರದ ಯುವ ಈಜುಪಟು ಆದ್ಯಾ ಮಂಜುನಾಥ ಹಿರೇಮಠ ಎರಡು ಬೆಳ್ಳಿ ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಮೇ 29ರಿಂದ 31ರವರೆಗೆ ಏರ್ಪಡಿಸಿದ್ದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿರುವ ಆದ್ಯಾ, ಗ್ರೂಪ್ 2 ವಿಭಾಗದಲ್ಲಿ ಸ್ಪರ್ಧಿಸಿ ಸಾಮರ್ಥ್ಯ ಸಾಬೀತುಪಡಿಸಿದರು.
ಆದ್ಯಾ ಅವರು 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ 1.20 ನಿಮಿಷದಲ್ಲಿ ಗುರಿ ತಲುಪಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇದಲ್ಲದೆ 200 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ 2.49 ನಿಮಿಷದಲ್ಲಿ ಗುರಿ ತಲುಪಿ ಮತ್ತೊಂದು ಬೆಳ್ಳಿ ಪದಕ ಜಯಿಸಿದರು.
ಸ್ಪರ್ಧೆಯುದ್ದಕ್ಕೂ ಆದ್ಯಾ ಅತ್ಯುತ್ತಮ ತಂತ್ರಗಾರಿಕೆ, ಶಿಸ್ತುಬದ್ಧ ಈಜು ಹಾಗೂ ಹೋರಾಟ ಮನೋಭಾವ ಪ್ರದರ್ಶಿಸಿದ್ದು, ಅವರ ಕ್ರೀಡಾ ಪಯಣದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಅಲ್ಲದೇ ಈ ಸಾಧನೆಯ ಹಿಂದೆ ತರಬೇತುದಾರ ಸ್ಕಂದ ಆರ್. ಅಶ್ವತ್ಥ್ ಮಾರ್ಗದರ್ಶನ ಹಾಗೂ ನಿರಂತರ ತರಬೇತಿ ಪ್ರಮುಖ ಪಾತ್ರ ವಹಿಸಿದೆ. ಮತ್ತೊಬ್ಬ ತರಬೇತುದಾರ ಆಲ್ಬರ್ಟ್ ಸೆಬಾಸ್ಟಿಯನ್ ಅವರ ಪ್ರೋತ್ಸಾಹವೂ ಆದ್ಯಾ ಸಾಧನೆಗೆ ಬಲ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net