ಮುಂಗಡ ಬುಕಿಂಗ್ ಆರಂಭ

ಐಫೋನ್
ಐಫೋನ್
Published on

ಪ್ರಮುಖ ಮುಖ್ಯಾಂಶಗಳು

  • ಕ್ರೋಮಾದಲ್ಲಿ ಐಫೋನ್ 18 ಪ್ರೊ ಸರಣಿಗೆ ಮುಂಗಡ ಬುಕಿಂಗ್ ಆರಂಭ
ಟಾಟಾ ಸಮೂಹದ ಓಮ್ನಿ-ಚಾನೆಲ್ ಎಲೆಕ್ಟ್ರಾನಿಕ್ಸ್ ರಿಟೇಲ್ ಸಂಸ್ಥೆ ಕ್ರೋಮಾದಲ್ಲಿ ಬಹುನಿರೀಕ್ಷಿತ ಐಫೋನ್ 18 ಪ್ರೊ ಹಾಗೂ ಐಫೋನ್ 18 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳ ಮುಂಗಡ ಬುಕಿಂಗ್ ಆರಂಭಗೊಂಡಿದೆ.
ದೇಶಾದ್ಯಂತ ಕ್ರೋಮಾದ 560ಕ್ಕೂ ಅಧಿಕ ಮಳಿಗೆಗಳು, Croma.com, ಟಾಟಾ ನ್ಯೂ ಮೊಬೈಲ್ ಆ್ಯಪ್ ಹಾಗೂ ಬಿಗ್‌ಬಾಸ್ಕೆಟ್ ಮೂಲಕ ಗ್ರಾಹಕರು ನೂತನ ಐಫೋನ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.
ಕ್ರೋಮಾ ಮಳಿಗೆಗಳಲ್ಲಿ ಕೇವಲ ₹5,000 ಮುಂಗಡ ಪಾವತಿಸಿ ಐಫೋನ್ 18 ಪ್ರೊ ಅಥವಾ 18 ಪ್ರೊ ಮ್ಯಾಕ್ಸ್ ಬುಕ್ ಮಾಡಬಹುದಾಗಿದೆ. ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡುವವರು ಪೂರ್ಣ ಮೊತ್ತ ಪಾವತಿಸಬೇಕಾಗುತ್ತದೆ. ಹಳೆಯ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಮಾಡುವ ಗ್ರಾಹಕರಿಗೆ ₹12,000 ವರೆಗೆ ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ.
ನೂತನ ಪ್ರೊ ಸರಣಿಯಲ್ಲಿ ಸುಧಾರಿತ ಎ20 ಪ್ರೊ ಚಿಪ್, ಸಿ2 ವೈರ್‌ಲೆಸ್ ಮೋಡೆಮ್ ಹಾಗೂ ಭೌತಿಕ ವೇರಿಯಬಲ್ ಅಪರ್ಚರ್ ಹೊಂದಿರುವ 48 ಮೆಗಾಪಿಕ್ಸೆಲ್ ಫ್ಯೂಷನ್ ಮುಖ್ಯ ಕ್ಯಾಮೆರಾ ಸೇರಿದಂತೆ ಹಲವು ತಾಂತ್ರಿಕ ವೈಶಿಷ್ಟ್ಯಗಳಿವೆ ಎಂದು ಸಂಸ್ಥೆ ತಿಳಿಸಿದೆ.
ಐಫೋನ್ 17 ಪ್ರೊಗೆ ಭರ್ಜರಿ ರಿಯಾಯಿತಿ
ನೂತನ ಸರಣಿಯೊಂದಿಗೆ ಐಫೋನ್ 17 ಪ್ರೊ ಮತ್ತು 17 ಪ್ರೊ ಮ್ಯಾಕ್ಸ್‌ಗೂ ಕ್ರೋಮಾ ವಿಶೇಷ ಬೆಲೆ ಘೋಷಿಸಿದೆ.

ಐಫೋನ್ 17 ಪ್ರೊ:

- 256GB – ₹69,990*
- 512GB – ₹88,490*
- ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಿಗೆ ₹4,000 ಕ್ಯಾಶ್‌ಬ್ಯಾಕ್
- ಐಫೋನ್ 15 ಪ್ರೊ ಎಕ್ಸ್‌ಚೇಂಜ್‌ಗೆ ಗರಿಷ್ಠ ₹44,500 ಮೌಲ್ಯ
- ಹೆಚ್ಚುವರಿ ₹12,000 ವರೆಗೆ ಎಕ್ಸ್‌ಚೇಂಜ್ ಬೋನಸ್
ಐಫೋನ್ 17 ಪ್ರೊ ಮ್ಯಾಕ್ಸ್:
- 256GB – ₹74,990*
- 512GB – ₹94,990*
- ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಿಗೆ ₹4,000 ಕ್ಯಾಶ್‌ಬ್ಯಾಕ್
- ಐಫೋನ್ 15 ಪ್ರೊ ಮ್ಯಾಕ್ಸ್ ಎಕ್ಸ್‌ಚೇಂಜ್‌ಗೆ ಗರಿಷ್ಠ ₹53,000 ಮೌಲ್ಯ
- ಹೆಚ್ಚುವರಿ ₹12,000 ವರೆಗೆ ಎಕ್ಸ್‌ಚೇಂಜ್ ಬೋನಸ್
ಐಫೋನ್ 17 ಪ್ರೊ ಸರಣಿಯ ಆನ್‌ಲೈನ್ ದರಗಳು ಸೆಪ್ಟೆಂಬರ್ 15ರಿಂದ Croma.comನಲ್ಲಿ ಕ್ರಮವಾಗಿ ₹1,26,490ರಿಂದ ಮತ್ತು ₹1,39,990ರಿಂದ ಆರಂಭವಾಗಲಿವೆ ಎಂದು ಸಂಸ್ಥೆ ತಿಳಿಸಿದೆ.
ಇದಲ್ಲದೆ, ಆಪಲ್ ವಾಚ್ ಸೀರೀಸ್ 12, ಆಪಲ್ ವಾಚ್ ಅಲ್ಟ್ರಾ 4 ಹಾಗೂ ಏರ್‌ಪಾಡ್ಸ್‌ಗಳಿಗೂ ಕ್ರೋಮಾ ಮಳಿಗೆಗಳಲ್ಲಿ ₹2,000 ಮುಂಗಡ ಪಾವತಿಸಿ ಬುಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಕ್ರೋಮಾ ದೇಶದ 200ಕ್ಕೂ ಅಧಿಕ ನಗರಗಳಲ್ಲಿ 560ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಗ್ರಾಹಕರು ಬೆಲೆ, ಸ್ಟಾಕ್ ಲಭ್ಯತೆ ಹಾಗೂ ಕೊಡುಗೆಗಳ ಸಂಪೂರ್ಣ ಮಾಹಿತಿಗಾಗಿ ಸಮೀಪದ ಕ್ರೋಮಾ ಮಳಿಗೆ ಅಥವಾ ಅಧಿಕೃತ Croma.com ಜಾಲತಾಣವನ್ನು ಪರಿಶೀಲಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net