ಕೊಯಮತ್ತೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಾಸಭೆಯಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜನಿಯರ್ಸ್ (ಎಸಿಸಿಇ) ಇಂಡಿಯಾ ಮೈಸೂರು ಶಾಖೆಯು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಎಸ್.ಬಿ.ಬಸವರಾಜ್, ಸಿ.ಎಸ್.ಶ್ರೀಕಾಂತ್, ಡಾ.ಬಿ.ಎಸ್.ಕೀರ್ತಿಗೌಡ ಅವರು ಪ್ರಶಸ್ತಿ ಸ್ವೀಕರಿಸಿದರು. ಡಾ.ಜಿ.ಎಸ್.ಸುರೇಶ್, ಡಿ.ಹರೀಶ್‌ಕುಮಾರ್, ಎಂ.ಎನ್.ರಘು, ಕೆ.ಎನ್.ರಾಜು ಇತರರು ಇದ್ದರು.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಯೋಜಿಸಿದ್ದ ಮಹಾಸಭೆಯಲ್ಲಿ ಪ್ರದಾನ
ಮೈಸೂರು:
ತಮಿಳುನಾಡಿನ ಕೊಯಮತ್ತೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಾಸಭೆಯಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಎಸಿಸಿಇ) ಇಂಡಿಯಾ ಮೈಸೂರು ಶಾಖೆಯು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಆಲ್ ಇಂಡಿಯಾ ಚಾಂಪಿಯನ್ ವಿನ್ನರ್, ಆಲ್ ಇಂಡಿಯಾ ಬೆಸ್ಟ್ ಸೆಂಟರ್-2026, ಮಧ್ಯಮ ಕೇಂದ್ರ ವಿಭಾಗದಲ್ಲಿ ಪ್ರಥಮ, ಪ್ಲಾಟಿನಂ ಪ್ಲಸ್-2026 ಹಾಗೂ ತಾಂತ್ರಿಕ ಜ್ಞಾನ ಹಂಚಿಕೆಯಲ್ಲಿ ಎಕ್ಸಲೆನ್ಸ್ ಇಂಪ್ಯಾಕ್ಟ್ -2026 ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದೆ.
ಒಂದು ವರ್ಷದ ಅವಧಿಯಲ್ಲಿ ಮೈಸೂರು ಕೇಂದ್ರ ನಡೆಸಿದ ಅತ್ಯುತ್ತಮ ಸಮಗ್ರ ಚಟುವಟಿಕೆ, ಸಿವಿಲ್ ಇಂಜಿನಿಯರ್‌ಗಳ ನಡುವೆ ಬಾಂಧವ್ಯ ಬಲಪಡಿಸಿದ ಕಾರ್ಯಗಳು, ಕೇಂದ್ರ ಕಚೇರಿಯೊಂದಿಗೆ ಉತ್ತಮ ಸಮನ್ವಯ ಬೆಳೆಸಿದ ಪ್ರಯತ್ನ, ತಾಂತ್ರಿಕ ಜ್ಞಾನ ಹಂಚಿಕೆ ಸೇರಿದಂತೆ ಹಲವು ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಮೈಸೂರು ಶಾಖೆ ಅಧ್ಯಕ್ಷ ಎಸ್.ಬಿ.ಬಸವರಾಜ್, ಕಾರ್ಯದರ್ಶಿ ಸಿ.ಎಸ್.ಶ್ರೀಕಾಂತ್, ಖಜಾಂಚಿ ಡಾ.ಬಿ.ಎಸ್.ಕೀರ್ತಿಗೌಡ ಅವರು ಪ್ರಶಸ್ತಿ ಸ್ವೀಕರಿಸಿದರು. ಮಾಜಿ ಧ್ಯಕ್ಷ ಡಾ.ಜಿ.ಎಸ್.ಸುರೇಶ್, ಸದಸ್ಯರಾದ ಡಿ.ಹರೀಶ್‌ಕುಮಾರ್, ಎಂ.ಎನ್.ರಘು, ಕೆ.ಎನ್.ರಾಜು ಇತರರು ಇದ್ದರು.
ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿ, ದಕ್ಷಿಣ ಉಪಾಧ್ಯಕ್ಷ ಪ್ರೇಮ್‌ಕುಮಾರ್, ಪಶ್ಚಿಮ ಉಪಾಧ್ಯಕ್ಷ ಅನಿಲ್ ಛಾಬುರಾವ್ ಕದ್ಭಾನೆ, ಖಜಾಂಚಿ ಸಿ.ಎಚ್.ಪ್ರಕಾಶ್ ವಿತರಿಸಿದರು.