ತತ್ತರಿಸಿದ ಸಮುದಾಯಕ್ಕೆ ಸಾಂತ್ವನ ಹೇಳುವುದೇ ಚುಟುಕು ಸಾಹಿತ್ಯ: ಡಾ.ಎಂ.ಜಿ.ಆರ್.ಅರಸ್ ಅಭಿಮತ

ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಆಯೋಜಿಸಿದ್ದ ‘ಸಂಕ್ರಾಂತಿ’ ಚುಟುಕು ಕವಿಗೋಷ್ಠಿಯನ್ನು ಡಾ.ಎಂ.ಜಿ.ಆರ್.ಅರಸು ಉದ್ಘಾಟಿಸಿದರು. ಡಾ.ಪಿ.ಎಚ್.ರಾಘವೇಂದ್ರ ಶೆಟ್ಟಿ, ಡಾ.ರತ್ನ ಹಾಲಪ್ಪಗೌಡ,  ಲಕ್ಷ್ಮೀ ದಿನೇಶ್, ಬಾನಂ ಲೋಕೇಶ್,ಆರ್.ವಿಜಂು ಸಮರ್ಥ, ಮಲ್ಲರಾಜೇ ಅರಸ್ ಇತರರು ಇದ್ದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಆಯೋಜಿಸಿದ್ದ ‘ಸಂಕ್ರಾಂತಿ’ ಚುಟುಕು ಕವಿಗೋಷ್ಠಿಯನ್ನು ಡಾ.ಎಂ.ಜಿ.ಆರ್.ಅರಸು ಉದ್ಘಾಟಿಸಿದರು. ಡಾ.ಪಿ.ಎಚ್.ರಾಘವೇಂದ್ರ ಶೆಟ್ಟಿ, ಡಾ.ರತ್ನ ಹಾಲಪ್ಪಗೌಡ, ಲಕ್ಷ್ಮೀ ದಿನೇಶ್, ಬಾನಂ ಲೋಕೇಶ್,ಆರ್.ವಿಜಂು ಸಮರ್ಥ, ಮಲ್ಲರಾಜೇ ಅರಸ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೊಂದ ಮನಸ್ಸಿಗೆ ಸಾಹಿತ್ಯ, ಕವನಗಳು ಸಮಾಧಾನ ತರುತ್ತದೆ
  • ಜಾತಿ, ಜಾತಿಗಳ ಮಧ್ಯೆ ವೈಮನಸ್ಸು ಇರುವ ಇಂತಹ ಸಂದರ್ಭದಲ್ಲಿ ಶಾಂತಚಿತ್ತ ವಾತಾವರಣ
ಮೈಸೂರು: ಅಶಾಂತಿ ವಾತಾವರಣದಲ್ಲಿ ತತ್ತರಿಸುವ ಸಮುದಾಯಕ್ಕೆ ಮೃದುವಾಗಿ ಸಾಂತ್ವನ ಹೇಳುವುದೇ ಚುಟುಕು ಸಾಹಿತ್ಯ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಡಾ.ಎಂ.ಜಿ.ಆರ್.ಅರಸ್ ಅಭಿಪ್ರಾಯಪಟ್ಟರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯಿಂದ ಸಿದ್ಧಾರ್ಥನಗರದ ಹಳ್ಳೂರು ಹನುಮಂತಪ್ಪ ವರಮಹಾಲಕ್ಷ್ಮಮ್ಮ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂಕ್ರಾಂತಿ’ ಚುಟುಕು ಕವಿಗೋಷ್ಠಿಯಲ್ಲಿ ಕವನ ವಾಚಿಸುವ ಮೂಲಕ ಉದ್ಘಾಟಿಸಿ ಅವರು ವಾತನಾಡಿದರು.
ನೊಂದ ಮನಸ್ಸಿಗೆ ಸಾಹಿತ್ಯ, ಕವನಗಳು ಸಮಾಧಾನ ತರುತ್ತದೆ. ಆಧುನೀಕ ದಿನಗಳಲ್ಲಿ ಮನುಷ್ಯ ನೆಮ್ಮದಿ ಕಳೆದುಕೊಂಡಿದ್ದಾನೆ. ಎಲ್ಲೆಡೆ ಯುದ್ಧ, ಅಶಾಂತಿ ವಾತಾವರಣ, ಆತಂಕದಲ್ಲಿ ಬದುಕುವಂತಾಗಿದೆ. ಇಂತಹ ತತ್ತರಿಸುವ ಸಮುದಾಂುಕ್ಕೆ ಮೃದುವಾಗಿ ಸಾಂತ್ವನ ಹೇಳುವುದೇ ಚುಟುಕು ಸಾಹಿತ್ಯ ಎಂದರು.
ಚುಟುಕು ಸಾಹಿತ್ಯ ರಾಗ, ದ್ವೇಷಗಳಿಂದ ದೂರವಿಡುವ ಮೃದು ಸಾಹಿತ್ಯ. ಜಾತಿ, ಜಾತಿಗಳ ಮಧ್ಯೆ ವೈಮನಸ್ಸು ಇರುವ ಇಂತಹ ಸಂದರ್ಭದಲ್ಲಿ ಶಾಂತಚಿತ್ತ ವಾತಾವರಣ, ಆತ್ಮೀಯತೆಯನ್ನು ಈ ಸಾಹಿತ್ಯ ಕಟ್ಟಿಕೊಡುತ್ತದೆ ಎಂದು ಹೇಳಿದರು.
ಹಿರಿಂು ಸವಾಜ ಸೇವಕ ಡಾ.ಪಿ.ಎಚ್.ರಾಘವೇಂದ್ರ ಶೆಟ್ಟಿ ಅವರ 80ನೇ ವರ್ಷದ ಹುಟ್ಟುಹಬ್ಬದ ಸವಿ ನೆನಪಿಗಾಗಿ ಸನ್ಮಾನಿಸಲಾಯಿತು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ರತ್ನಾ ಹಾಲಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು.
ವಾಸವಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀ ದಿನೇಶ್, ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾನಂ ಲೋಕೇಶ್, ಬೆಂಗಳೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆರ್.ವಿಜಂು ಸಮರ್ಥ, ಮಲ್ಲರಾಜೇ ಅರಸ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net