

ಮೈಸೂರು: ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್ ಬಳಿಕ ಮೈಸೂರಿನಲ್ಲಿ ಮತ್ತೊಬ್ಬ ಅಧಿಕಾರಿಯ ತಲೆದಂಡವಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ್ ವರ್ಗಾವಣೆ ಮಾಡಲಾಗಿದೆ.
ಡಿಎಚ್‌ಒ ಅಮರನಾಥ್ ಅವರು ನಿರಾಸಕ್ತಿಯಿಂದ ಟಾರ್ಗೆಟ್ ಆಗಿದ್ದರು. ಹಲವು ಬಾರಿ ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಂಡಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕೋವಿಡ್ ಸಭೆಯಲ್ಲಿ ಡಿಎಚ್‌ಒಗೆ ತರಾಟೆಗೆ ತೆಗೆದುಕೊಂಡಿದ್ದರು.
ತಾಲೂಕುವಾರು ಕರೊನಾ ಔಷಧಿ ಹಂಚಿಕೆ ವಿಚಾರದಲ್ಲೂ ತಪ್ಪು ಮಾಹಿತಿ ನೀಡಿದ್ದರು. ಈ ಬಗ್ಗೆ ಜಿಲ್ಲೆಯ ಬಹುತೇಕ ಎಲ್ಲ ಶಾಸಕರೂ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.
ಮೈಸೂರಿನ ಡಿಎಚ್‌ಒ ಆಗಿ ಡಾ.ಪ್ರಸಾದ್ ನೇಮಕ ಮಾಡಲಾಗಿದೆ. ಪ್ರಸಾದ್ ಅವರು ಈ ಹಿಂದೆ ಚಾಮರಾಜನಗರ ಡಿಎಚ್‌ಒ ಆಗಿದ್ದರು. ಅಧಿಕೃತ ಆದೇಶವಷ್ಟೇ ಬಾಕಿ ಇದೆ. (ದಿಗ್ವಿಜಯ ನ್ಯೂಸ್)