ದಸರಾ ವಿಶೇಷ- ರತ್ನಖಚಿತ ಸಿಂಹಾಸನ ಜೋಡಣೆ ಇಂದು

Mysore odeyar Throne
Published on

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಈ ಬಾರಿ ಸರಳವಾಗಿ ನಡೆಯಲಿದ್ದು, ಅರಮನೆಯಲ್ಲಿಂದು ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಇಂದು ನಡೆಯಲಿದೆ. ಬೆಳಗ್ಗೆ 8.30ರಿಂದ ಮಧ್ಯಾಹ್ನ 12.30ರೊಳಗಿನ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆ ನಡೆಸಲು ತೀರ್ಮಾನಿಸಿದ್ದಾರೆ.

ಅದರಂತೆ, ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾರ್ಗದರ್ಶನದಲ್ಲಿ ನಡೆಯಲಿರುವ ಜೋಡಣಾ ಕಾರ್ಯ ನಡೆಯಲಿದ್ದು, ನವರಾತ್ರಿ ದಿನಗಳಲ್ಲಿ ನಡೆಯಲಿರುವ ವೈಭವದ ಖಾಸಗಿ ದರ್ಬಾರ್ ಸಂದರ್ಭದಲ್ಲಿ ಬಳಕೆಯಾಗಲಿದೆ. ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಖಾಸಗಿ ದರ್ಬಾರ್​ಗೆ ಈ ಸಿಂಹಾಸನ ಬಳಸಲ್ಪಡುತ್ತದೆ. ಅದಕ್ಕೆ ಪೂರ್ವಭಾವಿಯಾಗಿ ಸಿಂಹಾಸನ ಜೋಡಣೆ ಮಾಡಲಾಗುತ್ತಿದೆ.

ರಾಜ ಪರಿವಾರ ಹಾಗೂ ಸಿಬ್ಬಂದಿ ಮಾತ್ರ ಈ ಸಂದರ್ಭದಲ್ಲಿ ಹಾಜರಿರುತ್ತಾರೆ. ಮುಂಜಾನೆಯಿಂದಲೇ ಪೂಜಾ ವಿಧಿ ವಿಧಾನ ಆರಂಭವಾಗಿದೆ. ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಅರಮನೆಗೆ ಪ್ರವಾಸಿಗರ ವೀಕ್ಷಣೆಗೆ‌ ನಿರ್ಬಂಧ ಹೇರಲಾಗಿದೆ. ಇದು ಇಂದು ಬೆಳಗ್ಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೂ ಚಾಲ್ತಿಯಲ್ಲಿ ಇರಲಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net