ಮುತ್ತೈದೆಯರ ಪೂಜೆ, ಕೊಂಡೋತ್ಸವ ಸಂಭ್ರಮ

ಮುತ್ತೈದೆಯರ ಪೂಜೆ, ಕೊಂಡೋತ್ಸವ ಸಂಭ್ರಮ
Published on

ತಿ.ನರಸೀಪುರ: ತಾಲೂಕಿನ ದೊಡ್ಡನಹುಂಡಿ ಗ್ರಾಮದಲ್ಲಿ ಸೋಮವಾರ ಮುತ್ತೈದೆಯರ ಪೂಜೆ ಹಾಗೂ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.

ಹಬ್ಬದ ಹಿನ್ನೆಲೆಯಲ್ಲಿ ಶ್ರೀಮಹದೇಶ್ವರ ದೇವಸ್ಥಾನವನ್ನು ತಳಿರು- ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇಗುಲದಲ್ಲಿ ಬೆಳಗ್ಗೆಯಿಂದಲೇ ವಿವಿಧ ಅಭಿಷೇಕ ಹಾಗೂ ಪೂಜೆ ನೆರವೇರಿದವು. ಮಧ್ಯಾಹ್ನ 12ಗಂಟೆಗೆ ಗಂಗಾಪೂಜೆ ನೆರವೇರಿಸಲಾಯಿತು. ನಂತರ ಮಂಗಳವಾದ್ಯ, ಬಸವ, ಸುಮಂಗಲಿಯರ ಕಳಸ ಕನ್ನಡಿಯೊಂದಿಗೆ ಮೆರವಣಿಗೆ ನಡೆಯಿತು.

1 ಗಂಟೆಗೆ ಶ್ರೀಮಹದೇಶ್ವರ ಹಾಗೂ ಶ್ರೀ ಸೀಸಳ್ಳಿ ಮಾರಮ್ಮ ದೇವಿ ಅವಾಹನೆಯಾದ ಅರ್ಚಕರು, ಭಕ್ತರ ಜಯಘೋಷದೊಂದಿಗೆ ಕೊಂಡ ಹಾಯ್ದರು. ಭಕ್ತರಿಗೆ ಅನ್ನಪ್ರಸಾದ, ಪಾನಕ, ಮಜ್ಜಿಗೆ ವಿತರಿಸಲಾಯಿತು.

ಬದನವಾಳು ದಿಲೀಪ್ ಶಾಸ್ತ್ರಿ ಮತ್ತು ತಂಡದಿಂದ ಶ್ರೀ ಶನಿಮಹಾತ್ಮ ಹರಿಕಥೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net