

ಸಿದ್ದಾಪುರ: ತಾಲೂಕಿನ ಬಾಳೇಸರ- ಬಾಳೂರು- ಸಾಗರ ಇಲ್ಲಿಯ ಸಿದ್ಧಿವಿನಾಯಕ ಸಂಗೀತ ವಿದ್ಯಾಲಯದ 18ನೇ ವಾರ್ಷಿಕೋತ್ಸವ ಇತ್ತೀಚೆಗೆ ಬಾಳೇಸರ ಶಾಲಾ ಆವಾರದಲ್ಲಿ ನಡೆಯಿತು.
ಬಾಳೇಸರ ಸಹಿಪ್ರಾ ಶಾಲಾ ಮುಖ್ಯಾಧ್ಯಾಪಕಿ ಕಲಾವತಿ ಹೆಗಡೆ ವಾರ್ಷಿಕೋತ್ಸವ ಉದ್ಘಾಟಿಸಿದರು. ನಾಗಪತಿ ಭಟ್ಟ ಮಿಳಗಾರ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ಉಮಾಮಹೇಶ್ವರ ಭಟ್ಟ , ರಶ್ಮಿ ವಿನಾಯಕ ಹೆಗಡೆ, ಅಶೋಕ ಹೆಗಡೆ ಶಮೇಮನೆ ಇತರರಿದ್ದರು. ಸಂಗೀತ ಶಿಕ್ಷಕ ರಾಮಚಂದ್ರ ಹೆಗಡೆ ತಂಗಾರಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ ಹೆಗಡೆ ಮಿಳಗಾರ ಕಾರ್ಯಕ್ರಮ ನಿರ್ವಹಿಸಿದರು. ಸಂಗೀತ ಶಾಲೆಯ 38 ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ ನಡೆಯಿತು. ಸಂಗೀತ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರ ವಿತರಿಸಿದರು.
ನಂತರ ವಿನಾಯಕ ಹೆಗಡೆ ಮುತ್ತಮುರುಡು ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಮಹೇಶ ಹೆಗಡೆ ಹೊಸಗದ್ದೆ, ಹಾಮೋನಿಯಂನಲ್ಲಿ ಭರತ್ ಹೆಗಡೆ ಹೆಬ್ಬಲಸು, ತಂಬೂರದಲ್ಲಿ ರಶ್ಮಿ ಹೆಗಡೆ ಚಿಟಮಾವು ಸಹಕರಿಸಿದರು.