

ಗೋಣಿಕೊಪ್ಪ: ಮುರುವಂಡ ತನುಷ್ ಅಪ್ಪಯ್ಯ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಪದವಿಗೇರಿದ್ದಾರೆ. ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ತೇರ್ಗಡೆಯಾಗಿ ಲೆಫ್ಟಿನೆಂಟ್ ಪದವಿಯೊಂದಿಗೆ ಹೊರಹೊಮ್ಮಿದ್ದಾರೆ.
ಕೊಳತೋಡು ಬೈಗೋಡು ಗ್ರಾಮದ ತನುಷ್ ಅಪ್ಪಯ್ಯ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ (ಕಾಪ್ಸ್) ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿ ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಅಲಹಾಬಾದ್‌ನಲ್ಲಿ ಎಸ್‌ಎಸ್‌ಬಿ ಪೂರ್ಣಗೊಳಿಸಿದ್ದ ತನುಷ್ ಅಪ್ಪಯ್ಯ, ಶಾರ್ಟ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 8ನೇ ರ‌್ಯಾಂಕ್ ಪಡೆದು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಸೇರಿದ್ದರು.
ತನುಷ್ ಅಪ್ಪಯ್ಯ ಕೊಳತೋಡು ಬೈಗೋಡು ಗ್ರಾಮದ ಮುರುವಂಡ ಎ.ಬೋಪಣ್ಣ (ಮುತ್ತು) ಮತ್ತು ವಿನುತಾ ದಂಪತಿಯ ಪುತ್ರರಾಗಿದ್ದಾರೆ.