

ಬಾಗಲಕೋಟೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಿಂದ ಸಿಎಂಗೆ ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮ ಬೇಡಿಕೆ ನೀಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮುರುಗೇಶ ನಿರಾಣಿ, ವೀರಶೈವ ಲಿಂಗಾಯತ ಇದು ಒಂದೇನೆ, ನಾನಿದನ್ನೂ ಡಿವೈಡ್ ಮಾಡೋಕೆ ಬಿಡಲ್ಲ ಎಂದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ಮಾಡಿ ಯಾರೋ ಒಬ್ರು ಪಾಠ ಕಲಿಯುತ್ತಿದ್ದಾರೆ. ಲಿಂಗಾಯತ ಬೇರೆ, ವೀರಶೈವ ಬೇರೆ ನಾವೆಲ್ಲ ಒಂದೇನೆ. ಅದಕ್ಕಾಗಿ ಮಹಾಸಭಾ ಆಗಲಿ, ಒಳಗಡೆ ಇದ್ದವರಾಗಲಿ ನಾವು ಅದನ್ನು ಟಚ್ ಮಾಡಿಲ್ಲ, ಮಾಡಬಾರದು. ಅದನ್ನು ನಾವ್ಯಾರೂ ಒಪ್ಪಲ್ಲ, ನನ್ನ ವೈಯಕ್ತಿಕವಾಗಿಯಂತೂ ನಾನು ಒಪ್ಪಲ್ಲ. ಸಮಸ್ತ ವೀರಶೈವ ಲಿಂಗಾಯತರಿಗೆ ಮೀಸಲಾತಿ ಪ್ರವರ್ಗ ಸಿಗಬೇಕು. ಇದರಲ್ಲಿ ಒಳ ಜಾತಿ ಬೇಡ. ವಿಧಾನಸಭೆ ಮೆಟ್ಟಿಲು ಮುಟ್ಟದೇ ಇರುವ ಸಮುದಾಯಗಳು ವೀರಶೈವ ಲಿಂಗಾಯತ ದಲ್ಲಿವೆ. ಅಂಥವರನ್ನ ಮೇಲೆ ಹೇಗೆ ತರಬೇಕು…? ಅದಕ್ಕಾಗಿ ಸಮಸ್ತ ವೀರಶೈವ ಲಿಂಗಾಯತರಿಗೆ ಏನೆ ಕೊಟ್ರು ಎಲ್ಲರಿಗೂ ಕೊಡಬೇಕು ಅನ್ನೋ ಉದ್ದೇಶ ಇದೆ ಎಂದು ತಿಳಿಸಿದರು.
ರೌಡಿಗಳಿಗೆ ಬಿಜೆಪಿ ರೆಡ್ ಕಾರ್ಪೇಟ್ ಹಾಕ್ತಿದ್ದಾರೆ ಎನ್ನುವ ವಿಚಾರಕ್ಕೆ ಸ್ಪಂದಿಸಿದ ಸಚಿವ ನಿರಾಣಿ, ಜ್ಞಾನೋದಯ ಆದವರನ್ನ ಮಾತ್ರ ಬಿಜೆಪಿಗೆ ಕರೆದುಕೊಳ್ಳಲಾಗುತ್ತಿದೆ. ವೇದಿಕೆಯಲ್ಲಿ ಕಾಣಿಸಿಕೊಂಡಾಗ ಅವರು ಯಾರು ಅಂತ ಗೊತ್ತಿರಲ್ಲ. ಅವರು ಯಾರು ಅಂತ ಆಮೇಲೆ ಗೊತ್ತಾಗುತ್ತೆ. ಸೆಲಿಗಾಗಿ ಅನೇಕರು ಬರುತ್ತಾರೆ. ಬೇಡ ಎನ್ನಲು ಬರಲ್ಲ. ಅವರು ಗೊತ್ತು ಇರಲ್ಲ, ಪರಿಚಯವೂ ಇರಲ್ಲ. ಏನು ಮಾಡುವುದು ಎಂದ ಅವರು, ಇಷ್ಟು ದಿವಸ ಇಲ್ಲಿ ಇದ್ದು ತಪ್ಪು ಮಾಡಿದೇವು ಅಂತ ಜ್ಞಾನೋದಯ ಆದವರನ್ನು ಕ್ಷಮಾಮಾಡಿ ಕರೆದುಕೊಳ್ಳುತ್ತೇವೆ ಎಂದರು.