ಮಾಗಡಿ: ತಾಲೂಕಿನ ಸೋಲೂರು ಗ್ರಾಮದಲ್ಲಿ ಅಣ್ಣ&ತಮ್ಮನ ನಡುವೆ ನಡೆದ ಜಗಳದಲ್ಲಿ ಅಣ್ಣನ ಕೊಲೆಯಾಗಿದೆ.
ಸೋಲೂರು ಗ್ರಾಮದ ನಿವಾಸಿ ನಾಗರಾಜು (40) ಮೃತ. ಚಂದ್ರಶೇಖರ ಹಾಗೂ ನಾಗರಾಜು ಇಬ್ಬರು ಜು.23ರ ರಾತ್ರಿ 11ರ ಸುಮಾರಿಗೆ ಮನೆಯಲ್ಲೆ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿದ್ದು, ಈ ವೇಳೆ ಚಂದ್ರಶೇಖರ, ನಾಗರಾಜು ಅವರನ್ನು ಮನೆಯಿಂದ ಹೊರಗೆ ಎಳೆದೊಯ್ದು ರಸ್ತೆ ಮೇಲೆ ತಳ್ಳಿ ಕಲ್ಲಿನಿಂದ ಹೊಡೆದಿದ್ದಾನೆ. ಇದರಿಂದ ನಾಗರಾಜು ರಕ್ತ ಸ್ರಾವವಾಗಿ ಪ್ರಜ್ಞಾಹಿನನಾಗಿದ್ದಾನೆ. ಕೂಡಲೇ ಸೋಲೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಕುದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಚಂದ್ರಶೇಖರನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.