ಅರಣ್ಯ ಇಲಾಖೆ ದಿನಗೂಲಿ ನೌಕರನ ಹತ್ಯೆ

Parashuram-Toraskar-Photo.
Published on

ಹಳಿಯಾಳ: ಅರಣ್ಯ ಇಲಾಖೆ ದಿನಗೂಲಿ ನೌಕರ, ಉರಗ ತಜ್ಞನನ್ನು ಹೊಲದಲ್ಲಿ ಹತ್ಯೆ ಮಾಡಿದ ಘಟನೆ ತಾಲೂಕಿನ ಕರ್ಲಕಟ್ಟಾದಲ್ಲಿ ನಡೆದಿದೆ.

2021 ನೇ ವರ್ಷದ ಸಾಮಾಜಿಕ ಕಾರ್ಯ ವಲಯದಲ್ಲಿ ಕೊಡಮಾಡುವ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದ ಹಳಿಯಾಳ 

ಅರಣ್ಯ ಇಲಾಖೆಯ ದಿನಗೂಲಿ ನೌಕರ, ಊರಗ ಪ್ರೇಮಿ ಪರಶುರಾಮ ತೋರಸ್ಕರ (54) ಹತ್ಯೆ ಯಾದವರು.

ತಾಲೂಕಿನ ಕರ್ಲಕಟ್ಟಾ ಗ್ರಾಮದ ವ್ಯಾಪ್ತಿಯ ತಮ್ಮ ಹೊಲದಲ್ಲಿ ಕೊಲೆಯಾಗಿದ್ದು ಗ್ರಾಮಸ್ಥರನ್ನು ಬೆಚ್ಚಿಬಿಳುವಂತೆ ಮಾಡಿದೆ. 

ಘಟನಾ ಸ್ಥಳಕ್ಕೆ ದಾಂಡೇಲಿ ಡಿವೈಎಸ್ಪಿ ಶಿವಾನಂದ ಕಟಗಿ,  ಸಿಪಿಐ ಸುರೇಶ ಶಿಂಗಿ, ಪಿಎಸ್ಐ ವಿನೋದ ರೆಡ್ಡಿ ಮತ್ತು ಕ್ರೈಂ ಪಿಎಸ್ಐ ಅಮೀನ್ ಅತ್ತಾರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದರು.

ಹಳಿಯಾಳ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. 

ಘಟನೆಯು ಮಧ್ಯಾಹ್ನ 2 ರಿಂದ 2:30 ರ ಆಸುಪಾಸಿನಲ್ಲೆ ನಡೆದಿದೆ ಎಂದು ಅನುಮಾನ ವ್ಯಕ್ತವಾಗಿದ್ದು  ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ನೆರೆದಿದ್ದಾರೆ.

ಹಳಿಯಾಳ ತಾಲೂಕಿನ ಭಾಗದಲ್ಲಿ ಉರಗ ಪ್ರೇಮಿಯಾಗಿ ಗುರುತಿಸಿಕೊಂಡಿದ್ದ ಮೃತರು ಸಹಸ್ರಾರು ಉರಗಗಳನ್ನು ಸಂರಕ್ಷಿಸಿ ಕಾಡಿಗೆ ಮರಳಿ ಬಿಟ್ಟಿದ್ದರು. ಹಾವಿನ ಬಗ್ಗೆ ಕಾಳಜಿ ಹೊಂದಿದ್ದ ಮೃತರು ತಮ್ಮ ನೈಜ ಕೆಲಸದೊಂದಿಗೆ ಹವ್ಯಾಸಿಕರಾಗಿ ಉರಗ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net