ಕ್ಷುಲ್ಲಕ ಕಾರಣದ ಜಗಳ ದಾರುಣ ಕೊಲೆಯಲ್ಲಿ ಅಂತ್ಯ: ಗಾಂಜಾ ಎಫೆಕ್ಟ್?

Double Murder
Published on

ರಾಮನಗರ: ಕ್ಷುಲ್ಲಕ ಕಾರಣಕ್ಕಾಗಿ ಆರಂಭಗೊಂಡ ಜಗಳ ಒಬ್ಬನ ದಾರುಣ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಚನ್ನಪಟ್ಟಣದ ಕಣ್ವ ಬಡಾವಣೆಯ ಪಾರ್ಕ್​ನಲ್ಲಿ ನಡೆದಿದೆ. ಚನ್ನಪಟ್ಟಣ ಸಯದ್ ವಾಡಿ ನಿವಾಸಿ ರಾಹೀಬ್ ಪಾಷ ( 24) ಕೊಲೆಯಾದವನು.

ಗುರುವಾರ ರಾತ್ರಿ ತನ್ನ ಸ್ನೇಹಿತರ‌ ಜತೆ ಸಾತನೂರು ರಸ್ತೆಯಲ್ಲಿರುವ ಕಣ್ಣ ಬಡಾವಣೆಗೆ ತೆರಳಿದ್ದ ರಾಹೀಬ್ ಸ್ನೇಹಿತರೊಂದಿಗೆ ಸಣ್ಣ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾನೆ. ಈ ವೇಳೆ ಸ್ನೇಹಿತರು ಆತನಿಗೆ ಡ್ರಾಗ್ಯರ್ ನಿಂದ ಚುಚ್ಚಿ ಪರಾರಿ ಆಗಿದ್ದಾರೆ. ತೀವ್ರಗಾಯೊಂಡಿದ್ದರೂ ಮನೆಯವರಿಗೆ ಕರೆ ಮಾಡಿದ್ದ ರಾಹೀಬ್, ಸಯ್ಯದ್ ಮುನಿರ್, ಸಯ್ಯದ್ ವಲ್ಲಿ, ಜುಬೇರ್ ಎಂಬುವರು ತನ್ನ ಮೇಲೆ ಡ್ಯಾಗರ್ ನಿಂದ ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದ. ಕುಟುಂಬ ಸದಸ್ಯರು ಸ್ಥಳಕ್ಕೆ ಹೋಗುವಷ್ಟರಲ್ಲಿ ರಾಹೀಬ್ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರದ ದಾಖಲು ಮಾಡಿಕೊಂಡಿರುವ ಚನ್ನಪಟ್ಟಣ ‌ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ. ಈ ಕೊಲೆಗೆ ಗಾಂಜಾ ಮತ್ತು ಕಾರಣ ಎಂದು ಹೇಳಲಾಗುತ್ತಿದ್ದು ಇದನ್ನು ಪೊಲೀಸರು ಖಚಿತಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net