ಕೊಲೆ ಆರೋಪಿ ಬಂಧನ

arrested
Published on

ಕಾಸರಗೋಡು: ಕೊಲೆ, ಹತ್ಯಾಯತ್ನ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಚೌಕಿ ಕಲ್ಲಂಗೈ ನಿವಾಸಿ, ಪ್ರಸಕ್ತ ಕುಂಬಳೆ ಮಾವಿನಕಟ್ಟೆ ಕ್ವಾಟ್ರರ್ಸ್‌ನಲ್ಲಿ ವಾಸಿಸುತ್ತಿರುವ ಅಭಿಲಾಷ್ ಅಲಿಯಾಸ್ ಹಬೀಬ್ ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ‘ಕಾಪಾ’ ಕಾಯ್ದೆಯನ್ವಯ ಬಂಧಿಸಿ ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ. ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಕೆ.ಪಿ.ವಿನೋದ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ.

ಕುಂಬಳೆ ಶಾಂತಿಪಳ್ಳ ಐಎಚ್‌ಆರ್‌ಡಿ ಕಾಲೇಜು ಸನಿಹದ ಮೂಸಾರಶೀದ್ ಯಾನೆ ಅಬ್ದುಲ್ ರಶೀದ್ ಎಂಬುವರನ್ನು ತಲೆಗೆ ಕಲ್ಲುಹಾಕಿ ಕೊಲೆಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಮೊಗ್ರಾಲಿನಲ್ಲಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣ, ಮಹಿಳೆಯೊಂದಿಗೆ ಸೇರಿ ಯುವಕನ ನಗ್ನಚಿತ್ರ ತೆಗೆದು ಬೆದರಿಕೆಯೊಡ್ಡಿ 15ಲಕ್ಷ ರೂ. ಬೇಡಿಕೆಯೊಡ್ಡಿದ್ದು, ಗಾಂಜಾ ಸಾಗಾಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಈ ಹಿಂದೆ ಕಾಪಾ ಅನ್ವಯ ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದನು. ಅಪರಾಧ ಕೃತ್ಯ ಮುಂದುವರಿಸಿದ ಹಿನ್ನೆಲೆಯಲ್ಲಿ ಮತ್ತೆ ಒಂದು ವರ್ಷ ಕಾಲ ‘ಕಾಪಾ’ಅನ್ವಯ ಜೈಲಿಗೆ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net