

ರಾಮನಗರ: ಬೆಂಗಳೂರು ವಿಶ್ವವಿದ್ಯಾಯದಲ್ಲಿ ಇತ್ತೀಚೆಗೆ ನಡೆದ 58ನೇ ಘಟಿಕೋತ್ಸವದಲ್ಲಿ ಹಾರೋಹಳ್ಳಿ ತಾಲ್ಲೂಕಿನ ಕಾಡುಜಕ್ಕಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಮುರುಳಿಕೃಷ್ಣ ಬಿ.ಎಂ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಪಿಎಚ್.ಡಿ ಪದವಿ ಪ್ರದಾನ ಮಾಡಿದರು.
ಮಾಗಡಿಯವರಾದ ಮುರುಳಿಕೃಷ್ಣ ಅವರು ಬೆಂಗಳೂರು ವಿ.ವಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಅವರ ಮಾರ್ಗದರ್ಶನದಲ್ಲಿ, ‘ಕಾಡುಗೊಲ್ಲರ ಕಟ್ಟೆಮನೆ ಮತ್ತು ಆರಾಧ್ಯ ದೈವಗಳ ಸಾಂಸ್ಕೃತಿಕ ಅಧ್ಯಯನ (ಶಾಸನ, ಜಾನಪದ, ಸಾಹಿತ್ಯಿಕ ಆಕರಗಳನ್ನು ಅನುಲಕ್ಷಿಸಿ) ವಿಷಯ ಕುರಿತು ಸಂಶೋಧನೆ ಮಾಡಿ ಮಹಾಪ್ರಬಂಧ ಮಂಡಿಸಿದ್ದರು. ಅದಕ್ಕೆ ವಿ.ವಿ.ಯು 2022ರ ಮೇ ತಿಂಗಳಲ್ಲಿ ಪಿಎಚ್.ಡಿ ನೀಡಿತ್ತು.
ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರಶೆಟ್ಟಿ ಇದ್ದಾರೆ