ಸಾಯಿ‌ ಮಂದಿರದಲ್ಲಿ ಭಾನುವಾರ ಮುನ್ನೂರರೆಡ್ಡಿ ಸಮಾಜದಿಂದ ವಿವಿಧ ಸ್ಪರ್ಧೆ

Sports
Published on


ಕಲಬುರಗಿ : ಜಿಲ್ಲಾ ಮುನ್ನೂರುರೆಡ್ಡಿ ಸಮಾಜ ಸಂಘದ ವಾರ್ಷಿಕ ಮಹಾಸಭೆಯ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ನಗರದ  ಜೇವರ್ಗಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರ ಹಾಗೂ  ಹೊಂದಿಕೊAಡ ಮೈದಾನದಲ್ಲಿ  ಆ.೨೭ ರಂದು  ಮಧ್ಯಾಹ್ನ ೩ ಗಂಟೆಗೆ ಆಯೋಜಿಸಲಾಗಿದೆ ಎಂದು ಗೌರವಾಧ್ಯಕ್ಷ ಡಾ.ಎಸ್.ಜಿ.ಗಚ್ಚಿನಮನಿ, ಅಧ್ಯಕ್ಷ ವಾಸುದೇವ ಪಾಟೀಲ್ ಮತ್ತು ಪ್ರಧಾನ ಕಾರ್ಯದರ್ಶಿ ಸೀತಾರಾಮ ಮುನ್ನೂರ ತಿಳಿಸಿದ್ದಾರೆ.
ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳಿಗೆ ಸೇರಿದಂತೆ  ಎಲ್ಲ ವಯೋಮಾನದವರಿಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಅಲ್ಲದೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಸಹ ನಡೆಯಲಿದೆ. ಮಹಿಳೆಯರಿಗೆ ರಂಗೋಲಿ ಇನ್ನಿತರ ಸ್ಪರ್ಧೆ ಸಹ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net