ಪುರಸಭೆ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಿ

20-11.MDL.01
ಮುದಗಲ್ ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ಮಾಡುತ್ತಿರುವ ಸ್ಥಳೀಯ ಪುರಸಭೆ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರವೇ ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ನಾಡಾಕಾರ್ಯಾಲಯ ಉಪ ತಹಸೀಲ್ದಾರ್ ತುಳಜರಾಮ ಸಿಂಗ್, ಪುರಸಭೆ ಮುಖ್ಯಾಧಿಕಾರಿ ನಭಿ ಕಂದಗಲ್ ಇತರರಿದ್ದರು.
Published on

ಮುದಗಲ್: ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ಮಾಡುತ್ತಿರುವ ಸ್ಥಳೀಯ ಪುರಸಭೆ ಸಿಬ್ಬಂದಿ ಆರ್ೀ ಉನ್ನಿಸ ಬೇಗಂ ವಿರುದ್ಧ ಕ್ರಮ ಜರುಗಿಸುವಂತೆ ಕರವೇ ಪದಾಧಿಕಾರಿಗಳು ಸೋಮವಾರ ಧರಣಿ ನಡೆಸಿ ತಹಸೀಲ್ದಾರ್ ಶಂಷಾವಲಿಗೆ ಮನವಿ ಸಲ್ಲಿಸಿದರು.

ಜನನ-ಮರಣ ಪ್ರಮಾಣ ಪತ್ರ ಕೊಡುವ ವಿಭಾಗದಲ್ಲಿನ ಸಿಬ್ಬಂದಿ ನಾಗರಿಕರೊಂದಿಗೆ ಸರಿಯಾಗಿ ಸ್ಪಂದಿಸದೆ ಅನುಚಿತವಾಗಿ ವರ್ತಿಸುತ್ತಾರೆ. ಮತ್ತು ಈ ಹಿಂದೆ ಸೇವೆಯಲ್ಲಿದ್ದ ಇಳಕಲ್ ಪುರಸಭೆಯಲ್ಲಿ ಹಲವಾರು ಬಾರಿ ಇಂತಹ ಘಟನೆ ನಡೆದಿದೆ. ಕರವೇ ಪದಾಧಿಕಾರಿ ಜೊತೆಗೆ ಮರಣ ಪ್ರಮಾಣ ಪತ್ರ ಕೇಳಲು ಹೋದಾಗ ನಿರ್ಲಕ್ಷ್ಯವಾಗಿ ವರ್ತಸಿದ್ದಾರೆ.

ಆದ್ದರಿಂದ ಕೂಡಲೇ ಕ್ರಮ ಜರುಗಿಸಿ ಸೇವೆಯಿಂದ ವಜಾಗೊಳಿಸಬೇಕೆಂದು ಮುದಗಲ್ ಕರವೇ ಅಧ್ಯಕ್ಷ ಎಸ್.ಎ.ನಯಿಂ ಒತ್ತಾಯಿಸಿದರು.
ಕರವೇ ಲಿಂಗಸುಗೂರು ಅಧ್ಯಕ್ಷ ಜಿಲಾನಿ ಪಾಷಾ, ಮುಖ್ಯಸ್ಥರಾದ ಇಸ್ಮಾಯಿಲ್ ಬಳೆಗಾರ, ಎಸ್.ಎನ್.ಖಾದ್ರಿ, ಮಹಾಂತೇಶ,ನಾಗರಾಜ ಮಟ್ಟೂರು, ಸಾಬು ಹುಸೇನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net