ಬಹುಗ್ರಾಮ ಕುಡಿಯುವ ನೀರು ಯೋಜನೆ ಸ್ಥಗಿತಕ್ಕೆ ಸೋಮಣ್ಣ ಅಸಮಾಧಾನ

water_Somanna
Published on

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಸ್ಥಗಿತಗೊಂಡಿರುವುದಕ್ಕೆ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಿಯ ಶಾಸಕ ಬಿ.ಸುರೇಶಗೌಡ ಮನವಿ ಹಿನ್ನೆಲೆ ನಾಗವಲ್ಲಿಯು ಸೇರಿದಂತೆ ಐದು ಗ್ರಾಪಂ ವ್ಯಾಪ್ತಿಯ ಹಲವು ಹಳ್ಳಿಗಳಿಗೆ ಶುದ್ಧ ನೀರು ಪಂಪ್​ ಮಾಡುವ ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಸೋಮಣ್ಣ, ಈ ಕುರಿತು ಕೂಡಲೆ ತನಿಖೆ ನಡೆಸುವಂತೆ ಜಿಪಂ ಸಿಇಒ ಜಿ.ಪ್ರಭುಗೆ ಆದೇಶ ನೀಡಿದರು. ಇಂತಹ ಯೋಜನೆಗಳು ಸೂಕ್ತ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡರೆ ಭೂವಿಯ ಮೇಲಿನ ನೀರು ಪೂರೈಕೆಯ ಸಿದ್ಧಾಂತಕ್ಕೆ ಅಪಚಾರ ಮಾಡಿದಂತೆ ಎಂದರು.

ಈ ಯೋಜನೆ ಸ್ಥಗಿತಗೊಂಡಿದ್ದಕ್ಕೆ ಕಾರಣ ಏನೇ ಇರಲಿ. ಇಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇರುವುದು ಎದ್ದು ಕಾಣುತ್ತದೆ. ಈ ಕುರಿತು ಒಂದು ತಿಂಗಳಲ್ಲಿ ತಮಗೆ ವರದಿ ಸಲ್ಲಿಸಬೇಕು. ಕೇಂದ್ರ ಜಲ್​ ಜೀವನ್​ ಮಿಷನ್​ನಿಂದ ಏನಾದರೂ ಹಣ ಸಹಾಯಬೇಕಾದರೆ ಒದಗಿಸಲು ತಾಮ ಸಿದ್ಧ . ಈ ಯೋಜನೆಯನ್ನು ಮರಳಿ ಸುಸ್ಥಿತಿಗೆ ತರಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಕೂಡಲೇ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್​, ಜಿಪಂ ಸಿಇಒ ಜಿ.ಪ್ರಭು, ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​, ಜಿಪಂ ಮಾಜಿ ಸದಸ್ಯ ಗೂಳೂರು ಶಿವಕುಮಾರ್​, ಎಸ್​.ಶಿವಪ್ರಸಾದ್​, ರಾಜಶೇಖರ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net