ಮುಲ್ಲಾ ಸಮುದಾಯಕ್ಕೆ ಸೌಲಭ್ಯ ಒದಗಿಸಿ

Untitled design (2)
ಲಿಂಗಸುಗೂರು ತಹಸಿಲ್ ಕಚೇರಿ ಶಿರಸ್ತೇದಾರ ಸೈಯದ್ ಮೋಯಿನುದ್ದೀನ್‌ಗೆ ಕರ್ನಾಟಕ ಮುಲ್ಲಾ ಅಸೋಸಿಯೇಶನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ರಾಜಮೊಹ್ಮದ್ ಮುಲ್ಲಾ, ಮಹ್ಮದ್ ಮುಸ್ತಫಾ, ಮಹ್ಮದ್ ಸಾಬ, ರೆಹಮಾನ್ ಸಾಬ, ಬಶೀರ ಅಹ್ಮದ್, ಹಾಜೀಮ್, ಮಹಿಬೂಬ ಇದ್ದರು.
Published on

ಲಿಂಗಸುಗೂರು: ಮುಲ್ಲಾ ಅಭಿವೃದ್ಧಿ ನಿಗಮ ರಚನೆ ಮಾಡಲು ಒತ್ತಾಯಿಸಿ ಕರ್ನಾಟಕ ಮುಲ್ಲಾ ಅಸೋಸಿಯೇಶನ್ ನೇತೃತ್ವದಲ್ಲಿ ಪಟ್ಟಣದ ತಹಸಿಲ್ ಕಚೇರಿಯ ಶಿರಸ್ತೇದಾರ್ ಸೈಯದ್ ಮೋಯಿನುದ್ದೀನ್‌ಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಮುಲ್ಲಾ ಸಮುದಾಯ ಅಭಿವೃದ್ಧಿಪಡಿಸಿ

ರಾಜ್ಯದಲ್ಲಿ 13 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಪ್ರಮುಖ ಮುಲ್ಲಾ ಸಮುದಾಯವು ಇತಿಹಾಸ ಪರಂಪರೆಯಲ್ಲಿ ಮುಂಚೂಣಿ ವ್ಯವಸ್ಥಾಪಕ ಸ್ಥಾನ ಪಡೆದಿದೆ. ಮುಸ್ಲಿಂ ಸಮುದಾಯದ ಪ್ರಮುಖ ಕಾರ್ಯಗಳಲ್ಲಿ ಮುಂದಾಳತ್ವವಹಿಸಿದ್ದಾರೆ. ಅಲ್ಲದೆ ಬೇರೆ ಸಮುದಾಯಗಳ ಜತೆ ಸೌಹಾರ್ದಯುತವಾಗಿ ಸಾಗುವ ಮುಲ್ಲಾ ಸಮುದಾಯ ಕಡು ಬಡತನದಲ್ಲಿ ಉಚಿತ ಸೇವೆ ನೀಡುತ್ತಾ ಬರುತ್ತಿದೆ. ಸರ್ಕಾರ ಈ ಹಿಂದೆ ಪಿಂಚಣಿ ಇನಾಮ್ ಜಮೀನು ನೀಡಿ ಗೌರವಿಸಿತ್ತು. ಇದೀಗ ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿರುವುದು ಸಮುದಾಯಕ್ಕೆ ಸಂರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ, ನಗರಗಳಲ್ಲಿ ಆಚರಿಸುವ ಮೊಹರಂ ಹಬ್ಬಕ್ಕೆ ಸಹಾಯಧನ ಒದಗಿಸಬೇಕು. ಮೊಹರಂ ಹಬ್ಬದ ರೂವಾರಿಗಳು, ದರ್ಗಾದ ಮುತವಲ್ಲಿ ಅವರಿಗೆ ಮಾಸಿಕ ಪಿಂಚಣಿ ನೀಡಬೇಕು. ಮುಲ್ಲಾ ಸಮುದಾಯವನ್ನು ಪ್ರವರ್ಗ 1ನೇ ವರ್ಗಕ್ಕೆ ಸೇರಿಸಬೇಕು. ಬಡ ಕುಟುಂಬಗಳಿಗೆ ಸರ್ಕಾರಿ ನೌಕರಿ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net