

ಚಿತ್ರದುರ್ಗ: ನಗರದ ಜೋಗಿಮಟ್ಟಿ ರಸ್ತೆ ಸ್ವಾಮಿ ವಿವೇಕಾನಂದ ನಗರದ ಮುಕ್ತಿನಾಥೇಶ್ವರ ಸ್ವಾಮಿ ದೇವಾಲಯ ಹಾಗೂ ಹಿಂದು ರುದ್ರಭೂಮಿ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆ 2.50 ಲಕ್ಷ ರೂ. ನೆರವು ನೀಡಿದೆ.
ಟ್ರಸ್ಟ್ ಗೌರವಾಧ್ಯಕ್ಷ ಎಸ್.ವಿ.ಗುರುಮೂರ್ತಿ, ಅಧ್ಯಕ್ಷ ಇ.ಅಶೋಕ್ ಕುಮಾರ್ ಅವರಿಗೆ ಗುರುವಾರ ಮಂಜೂರು ಪತ್ರವನ್ನು ಹಸ್ತಾಂತರಿಸಲಾಯಿತು.
ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಕೆರೆಗಳ ಹೂಳೆತ್ತುವುದು, ಸ್ಮಶಾನಗಳ ಜೀರ್ಣೋದ್ಧಾರ ಮೊದಲಾದ ಸಮಾಜಮುಖಿ ಸೇವಾ ಕಾರ‌್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ವೆಂಕಟೇಶ್‌ಬಾಬು, ಡಿ.ರಾಜು, ಸೋಮಪ್ಪ ಮಾಸ್ಟರ್, ಆರ್.ನಾಗರಾಜ್, ಮೋಹನ್ ಮಂಜುನಾಥ್, ತಿಮ್ಮಣ್ಣ, ವಿಜಯಕುಮಾರ್, ಡೇರಿ ಶ್ರೀನಿವಾಸ್, ನಗರಸಭೆ ಸದಸ್ಯೆಆರ್.ನಾಗಮ್ಮ, ಮಾಜಿ ಸದಸ್ಯ ಮಹೇಶ್, ಸಿವಿಲ್‌ಇಂಜಿನಿಯರ್ ಉಮೇಶ್, ಡಿಎಆರ್ ಪಿಎಸ್‌ಐ ಶಿವರಾಜ್, ಏಕನಾಥೇಶ್ವರಿ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೊರೆಸ್ವಾಮಿ ಮತ್ತಿತರರು ಇದ್ದರು.